

ಚಿಕ್ಕನಾಯಕನಹಳ್ಳಿ : ತಾಲೂಕಿನಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ಶಾಲೆಗಳಲ್ಲಿ ಅನೇಕ ಬಡ ಮಕ್ಕಳ ಪಾಲಿಗೆ ಅಕ್ಷಯಪಾತ್ರೆಯಾಗಿತ್ತು. ಮಧ್ಯಾಹ್ನದ ಬಿಸಿಯೂಟ ನಂಬಿಕೊಂಡಿದ್ದ ಹಲವಾರು ಮಕ್ಕಳಿಗೆ ಈಗ ಧಾನ್ಯ ವಿತರಣೆಯು ಸ್ವಲ್ಪಮಟ್ಟಿಗೆ ಹಸಿವು ನೀಗಿಸಿದೆ.
ಏಪ್ರಿಲ್ ತಿಂಗಳಲ್ಲೇ ಕರೊನಾ ಭೀತಿಯಿಂದ ಶಾಲೆಗಳ ಬಾಗಿಲು ಮುಚ್ಚಲಾಯಿತು. ಆ ಸಮಯದಲ್ಲಿ 21 ದಿನಗಳಿಗೆ ಆಗುವಷ್ಟು ಆಹಾರ ಸಾಮಗ್ರಿಯನ್ನು ವಿದ್ಯಾರ್ಥಿಗಳ ಮನೆಗಳಿಗೆ ನೀಡಲಾಗಿತ್ತು. ನಂತರ ಬೇಸಿಗೆ ರಜೆ ಅವಧಿಯಲ್ಲಿಯೂ ಧಾನ್ಯ ವಿತರಿಸುವಂತೆ ಸರ್ಕಾರ ಆದೇಶ ನೀಡಿದ್ದರಿಂದ ಏ.11ರಿಂದ ಮೇ 28ರವರೆಗೆ ಸಾರ್ವತ್ರಿಕ ರಜೆ ಹೊರತುಪಡಿಸಿ ಒಟ್ಟು 37 ದಿನಗಳ ಧಾನ್ಯವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿತ್ತು. ಮೇ ಮಾಸಾಂತ್ಯದಿಂದ ಈವರೆಗೆ ಆಹಾರ ಧಾನ್ಯ ವಿತರಣೆಯಾಗಿಲ್ಲ. ಆದರೂ ಒಟ್ಟಾರೆ ಯೋಜನೆ ಬಗ್ಗೆ ನಾಗರಿಕ ವಲಯದಲ್ಲಿ ಮೆಚ್ಚಗೆ ವ್ಯಕ್ತವಾಗಿದೆ.
ಲಭ್ಯವಿರುವ ಧಾನ್ಯ ವಿತರಣೆ : ತಾಲೂಕಿನಲ್ಲಿ 304 ಪ್ರಾಥಮಿಕ ಶಾಲೆಗಳು, 49 ಪ್ರೌಢಶಾಲೆಗಳು ಇದ್ದು, ಒಟ್ಟು 20,109 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ 1ರಿಂದ 5ನೇ ತರಗತಿಯವರೆಗೆ (37 ದಿನಗಳಿಗೆ) ಒಬ್ಬ ವಿದ್ಯಾರ್ಥಿಗೆ 3.7 ಕೆಜಿ ಅಕ್ಕಿ (ದಿನಕ್ಕೆ 100 ಗ್ರಾಂ.ನಂತೆ) ಹಾಗೂ ಪರಿವರ್ತನಾ ವೆಚ್ಚಕ್ಕೆ ಬದಲಾಗಿ 500 ಗ್ರಾಂ ಹಾಲಿನಪುಡಿ, 500 ಗ್ರಾಂ ತೊಗರಿಬೇಳೆ ಅಥವಾ 2.25 ಕೆಜಿ ತೊಗರಿಬೇಳೆ ; 7ರಿಂದ 10ನೇ ತರಗತಿಯವರೆಗೆ ಒಬ್ಬ ವಿದ್ಯಾರ್ಥಿಗೆ 5.5ಕೆ.ಜಿ.ಅಕ್ಕಿ (ದಿನಕ್ಕೆ 150 ಗ್ರಾಂ), 500 ಗ್ರಾಂ ಹಾಲಿನ ಪುಡಿ, ಒಂದು ಲೀಟರ್ ಅಡುಗೆ ಎಣ್ಣೆ, 600 ಗ್ರಾಂ ತೊಗರಿಬೇಳೆ ಅಥವಾ 3.5 ಕೆಜಿ ತೊಗರಿ ಬೇಳೆಯಂತೆ ಲಭ್ಯವಿರುವ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ.
ತಾಲೂಕಿನಲ್ಲಿ ಸಮರ್ಪಕವಾಗಿ ಆಹಾರಧಾನ್ಯ ವಿತರಣೆಯಾಗುತ್ತಿದ್ದು, ಸರ್ಕಾರದ ಆದೇಶದಂತೆ ಸುವಾರು 300 ಶಾಲೆಗಳ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ವಿತರಿಸಲಾಗಿದೆ. ಉಳಿದ ಶಾಲೆಗಳ ಮಕ್ಕಳಿಗೂ ವಿತರಣೆ ವಾಡಲಾಗುತ್ತದೆ. ಜೂನ್ ಆಹಾರಧಾನ್ಯ ಶೇಖರಿಸಲಾಗಿದ್ದು, ಸರ್ಕಾರದ ಮುಂದಿನ ಆದೇಶದಂತೆ ಕ್ರಮವಹಿಸಲಾಗುವುದು. ಕಾಂತರಾಜು ಅಕ್ಷರ ದಾಸೋಹ ಪ್ರಭಾರ ಸಹಾಯಕ ನಿರ್ದೇಶಕ, ಚಿ.ನಾ.ಹಳ್ಳಿ ಈಗ 37 ದಿನಗಳ ಬಿಸಿಯೂಟದ ಆಹಾರ ಧಾನ್ಯ ವಿತರಣೆ ವಾಡಲಾಗಿದೆ. ಆದರೆ ಜೂನ್ ಹಾಗೂ ಜುಲೈ ತಿಂಗಳ ಬಿಸಿಯೂಟದ ಧಾನ್ಯ ವಿತರಣೆಗೆ ಸರ್ಕಾರ ಕ್ರಮಕೈಗೊಳ್ಳಬೇಕು. ನಾಗರಾಜು ಎಸ್‌ಡಿಎಂಸಿ ಅಧ್ಯಕ್ಷ, ಶೆಟ್ಟಿಕೆರೆ ಪ್ರಾಥಮಿಕ ಶಾಲೆ