

ಸುಂಟಿಕೊಪ್ಪ: ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ 2ನೇ ದಿನವಾದ ಶನಿವಾರ ನಡೆದ ಪಂದ್ಯಾವಳಿಯಲ್ಲಿ ಮಿಡ್‌ಸಿಟಿ ಮತ್ತು ಕೊಡಗರಹಳ್ಳಿ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದವು.
ಜಿಎಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ ಯೂತ್ ಕ್ಲಬ್ ವತಿಯಿಂದ 39ನೇ ವರ್ಷದ ಆಯೋಜಿಸಲಾಗಿರುವ ಪುಟ್ಬಾಲ್ ಪಂದ್ಯಾವಳಿಯಲ್ಲಿ ಮಿಡ್‌ಸಿಟಿ ಸುಂಟಿಕೊಪ್ಪ ಹಾಗೂ ಫ್ರೆಂಡ್ಸ್ ಎಫ್‌ಸಿ ಬೀಟ್ಟಿಕಟ್ಟೆ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮಿಡ್‌ಸಿಟಿ ತಂಡ ಎದುರಾಳಿ ತಂಡದ ವಿರುದ್ಧ ಆಕ್ರಮಣಕಾರಿ ಆಟಕ್ಕೆ ಇಳಿದ ಮಿಡ್‌ಸಿಟಿ ತಂಡದ ದಿವಾಕರ್ ಮೊದಲಾರ್ಧದಲ್ಲಿ ಒಂದು ಗೋಲು ಹಾಗೂ ಮುಸ್ತಾಕ್ ಮತ್ತೊಂದು ಗೋಲು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು.
ದ್ವೀತಿಯಾರ್ಧದ 2ನೇ ನಿಮಿಷದಲ್ಲಿ ದಿವಾಕರ್ ಮತ್ತೊಂದು ಗೋಲುಗಳಿಸಿದರೇ ಮತ್ತೇ ಮಿಡ್‌ಸಿಟಿ ತಂಡದ ಪಾಂಡ್ಯನ್ 4ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡ ನೀಡಿದರು. 12ನೇ ನಿಮಿಷದಲ್ಲಿ ಮಿಡ್‌ಸಿಟಿ ತಂಡದ ವಿಜು ಮತ್ತೊಂದು ಗೋಲು ಗಳಿಸುವ ಮೂಲಕ ಮತ್ತಷ್ಟು ಅಂತರ ಹೆಚ್ಚಿಸಿದರು. ಬೀಟಿಕಟ್ಟೆ ತಂಡವು ಆಕ್ರಮಣಕಾರಿ ಆಟಕ್ಕೆ ಇಳಿದು ತಂಡದ ಮುನ್ನಡೆ ಆಟಗಾರ ಪ್ರೀತಂ 18ನೇ ನಿಮಿಷದಲ್ಲಿ 1 ಗೋಲು ಗಳಿಸುವ ಮೂಲಕ ಎದುರಾಳಿ ತಂಡದ ಗೋಲಿನ ಅಂತರವನ್ನು ಕಡಿಮೆ ಪ್ರಯತ್ನಿಸುತ್ತಿದ್ದಾಗಲೇ ಮಿಡ್‌ಸಿಟಿ ತಂಡದ ಸಾದಿಕ್ 19ನೇ ನಿಮಿಷದಲ್ಲಿ ಮತ್ತೊಂದು ಗೋಲು ಭಾರಿಸುವ ಮೂಲಕ 6-1 ಗೋಲುಗಳಿಂದ ಬೀಟಿಕಟ್ಟೆ ತಂಡವನ್ನು ಸೋಲಿನ ದವಡೆಗೆ ನೂಕಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ದ್ವಿತೀಯ ಪಂದ್ಯಾವಳಿಯಲ್ಲಿ ಆಲ್‌ಸ್ಟಾರ್ ಎಫ್.ಸಿ ಗೋಣಿಕೊಪ್ಪ ಹಾಗೂ ನೇತಾಜಿ ಯುವಕ ಸಂಘ ಕೊಡಗರಹಳ್ಳಿ ತಂಡಗಳ ನಡುವೆ ನಡೆದು ಮೊದಲಾರ್ಧದಲ್ಲಿ ಎರಡು ಸಮಬಲದ ಪ್ರದರ್ಶನವನ್ನು ನೀಡಿದ್ದು ಯಾವುದೇ ಗೋಲು ಗಳಿಸಲು ವಿಫಲಗೊಂಡಿತು.
ದ್ವಿತೀಯಾರ್ಧದಲ್ಲಿ ಗೋಣಿಕೊಪ್ಪ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಆದರೆ ಗೋಣಿಕೊಪ್ಪ ತಂಡ ಎಸಗಿದ ಸಣ್ಣ ತಪ್ಪಿನಿಂದ 12ನೇ ನಿಮಿಷದಲ್ಲಿ ಕೊಡಗರಹಳ್ಳಿ ಟ್ರೈ ಬ್ರೇಕರ್ ಅವಕಾಶ ದೊರಕಿತು. ಕೊಡಗರಹಳ್ಳಿ ತಂಡದ ಆಟಗಾರ ಪುನೀತ್ ಗೋಲು ಗಳಿಸುವ ಮೂಲಕ ಮುನ್ನಡೆ ಪಡೆದುಕೊಂಡರು. 15ನೇ ನಿಮೀಷದಲ್ಲಿ ಗೋಣಿಕೊಪ್ಪ ತಂಡದ ಮದನ್ ಆಕ್ರಮಕಾರಿ ಆಟಕ್ಕೆ ಇಳಿದು 1 ಗೋಲುಗಳಿಸುವ ಮೂಲಕ ಸಮಬಲ ಸಾಧಿಸಿದರು. ನಂತರ ಟ್ರೈಬ್ರೆಕರ್‌ನಲ್ಲಿ 3-2 ಗೋಲುಗಳಿಂದ ಕೊಡಗರಹಳ್ಳಿ ತಂಡವು ಗೆದ್ದುಕೊಂಡಿತು.
ಇಂದಿನ ಪಂದ್ಯಾವಳಿಗಳು : ಇಂಡಿಪೆಂಡೆಟ್ ಎಫ್.ಸಿ ಬೆಂಗಳೂರು-ಮಂಗಳೂರು ಎಫ್.ಸಿ.ಮಂಗಳೂರು,
ಮೊಗ್ರಲ್ ಎಫ್.ಸಿ ಕುಂಬ್ಳೆ - ಸ್ವರ್ಣ ಎಫ್.ಸಿ.ಮಂಡ್ಯ