

ಹುಬ್ಬಳ್ಳಿ: ಇಲ್ಲಿಯ ಅಭಿನಯ ಲೋಕ ಚಿಣ್ಣರ ರಂಗ ಮೇಳ ಸಂಸ್ಥೆಯು ಬೇಸಿಗೆ ರಜೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಅಭಿನಯ ತರಬೇತಿ ಶಿಬಿರದಲ್ಲಿ ಸಿದ್ಧಗೊಂಡ "ವಸಂತ ಹುಣ್ಣಿಮೆ ರಾತ್ರಿಯ ಕನಸು' ನಾಟಕ ಪ್ರದರ್ಶನವನ್ನು ಮೇ 10ರಂದು ಸಂಜೆ 6ಕ್ಕೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ.
ಶೇಕ್ಸ್ ಪಿಯರ್ ಮಹಾಕವಿಯ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಆಧಾರಿತ ನಾಟಕವನ್ನು ನೀನಾಸಂ ಪದವೀಧರ ರಂಗ ನಿರ್ದೇಶಕ ವಿಶ್ವನಾಥ ಕುಲಕರ್ಣಿ ನಿರ್ದೇಶನ ಮಾಡಿದ್ದಾರೆ. ಹರೀಶ ಕುಲಕರ್ಣಿ ಸಂಗೀತ, ಸಾರಿಕಾ ಅವರಾದಿ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾಟಕಕ್ಕೆ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಭಾಗವಹಿಸಲು ಸಂಘಟಕರ ಪರವಾಗಿ ಗುರುರಾಜ ಕೌಜಲಗಿ ಕೋರಿದ್ದಾರೆ.
ಉದ್ಘಾಟನೆ: ಅಭಿನಯ ಲೋಕ ಬೇಸಿಗೆ ರಜೆ ಅಭಿನಯ ತರಬೇತಿ ಶಿಬಿರದ ಸಮಾರೋಪ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಅತಿಥಿಗಳಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಪಾಲ್ಗೊಳ್ಳುವರು. ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ ಅಧ್ಯಕ್ಷತೆ ವಹಿಸುವರು ಎಂದು ಅಭಿನಯ ಲೋಕದ ಕಾರ್ಯದರ್ಶಿ ಅನುರಾಧಾ ಮಳಗಿ ತಿಳಿಸಿದ್ದಾರೆ.