ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ತರಾಟೆ

Microfinance staff beaten up
ಜಮಖಂಡಿ ನಗರದ ಅವಟಿ ಗಲ್ಲಿಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು.
Published on

ಜಮಖಂಡಿ: ಸಾಲ ವಸೂಲಿಗೆ ಮನೆ ಮುಂದೆ ಕುಳಿತ ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ಮಹಿಳೆಯರು ತೀವ್ರ ತರಾಟೆಗೆ ತೆಗೆದುಕೊಂಡರು.

ಸಾಲ ವಸೂಲಾತಿಗೆ ಕಿರುಕುಳ ನೀಡದಂತೆ ಮೈಕ್ರೋ ಫೈನಾನ್ಸ್‌ಗಳಿಗೆ ಸಿಎಂ ಎಚ್ಚರಿಕೆ ನೀಡಿದರೂ, ಈ ಕುರಿತು ಸಿಎಂ ಸಭೆ ನಡೆಸಿದ ದಿನದಂದೇ ಶನಿವಾರ ನಗರದ ಅವಟಿ ಗಲ್ಲಿಯಲ್ಲಿ ಸಾಲ ವಸೂಲಿಗೆಂದು ಬಂದ ಫೈನಾನ್ಸ್ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಗ ಮಹಿಳೆಯರು ಒಟ್ಟಾಗಿ ಮನೆ ಮುಂದೆ ಕುಳಿತು ಸಾಲ ವಸೂಲಿ ಮಾಡುವಂತೆ ತಮಗೆ ಯಾರು ಪರವಾನಗಿ ನೀಡಿದ್ದಾರೆ? ನಿಮ್ಮ ಕಡೆಯಿಂದ ಅನ್ನಿಸಿಕೊಂಡು ಸಾಕಾಗಿ ಹೋಗಿದೆ, ನಿಮಗೆ ಮಾನವಿಯತೆ ಇಲ್ಲವಾ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೊತ್ತಲ್ಲದ ಹೊತ್ತಲ್ಲಿ ಮನೆಗೆ ಬಂದು, ಮನೆಯಲ್ಲಿ ಇರುವ ವಸ್ತುಗಳನ್ನು ಒಯ್ಯುತ್ತಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹಣ ತುಂಬಲು ಆಗದಿದ್ರೆ ಆತ್ಮಹತ್ಯೆ ಮಾಡಿಕೊಳ್ಳಿ, ಇನ್ಶುರೆನ್ಸ್ ಹಣ ಬರುತ್ತದೆ ಎನ್ನುತ್ತಾರೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಉದ್ಯೋಗದಲ್ಲಿ ನಷ್ಟ ಆಗಿ ಸಾಲ ತುಂಬಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಸಾಲ ಮನ್ನಾ ಮಾಡಬೇಕು ಹಾಗೂ ಬಡ್ಡಿ ಆಸೆಗೆ ಬೇಕಾಬಿಟ್ಟಿ ಸಾಲ ನೀಡಿ ಕಿರುಕುಳ ನೀಡುತ್ತಿರುವ ಕಂಪನಿಗಳನ್ನು ಬ್ಯಾನ್ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಮುಖಂಡ ರಫೀಕ ಬಾರಿಗಡ್ಡಿ, ಸನಾ ಪೌಜಿ, ರೇಖಾ ಗೋಲೆ, ಶಬಾನಾ ಖಲಿಪಾ, ಆರೀಾ ಮಧುರಖಂಡಿ, ಲಕ್ಷ್ಮೀ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net