ಮೈಕ್ರೋ ಸಾಲಗಾರರ ಕಾಟಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ

3-RNR-01 malatesh
Published on

ರಾಣೆಬೆನ್ನೂರ: ಮೈಕ್ರೋ ೈನಾನ್ಸ್​ನವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಪ್ರಕರಣ ಮುಂದುವರಿದಿದ್ದು ಪತ್ನಿ ಸಾಲ ತುಂಬಲು ಹಣ ತರಲು ತವರು ಮನೆಗೆ ಹೋದಾಗ ಪತಿ ಆತ್ಮಹತ್ಯೆ ಮಾಡಿಕೊಂಡ ಟನೆ ಸೋಮವಾರ ನಡೆದಿದೆ.

ನಗರದ ಅಡವಿ ಆಂಜನೇಯ ಬಡಾವಣೆಯ ನಿವಾಸಿ ಮಾಲತೇಶ ನಾಗಪ್ಪ ಅರಸೀಕೆರಿ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಈತ ಹೇರ್​ ಕಟಿಂಗ್​ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಪತ್ನಿ ಗೀತಾ ಹಾಗೂ ಈತನ ಹೆಸರಿನಲ್ಲಿ ವಿವಿಧ ಮೈಕ್ರೋ ೈನಾನ್ಸ್​ ಮತ್ತು ಸಂ&ಸಂಸ್ಥೆಗಳಲ್ಲಿ 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸೋಮವಾರ ಬೆಳಗ್ಗೆ ಸಾಲದ ಕಂತು 5500 ರೂ. ತುಂಬ ಬೇಕಿತ್ತು. ಆದರೆ, ಕೈಯಲ್ಲಿ ಹಣವಿಲ್ಲದ ಕಾರಣ ಪತ್ನಿ ಗೀತಾ ಹಣ ತೆಗೆದುಕೊಂಡು ಬರುವೆ ಎಂದು ಹೇಳಿ ಭಾನುವಾರ ದಾವಣಗೆರೆಗೆ ತೆರಳಿದ್ದರು. ಸೋಮವಾರ ಅವರು ವಾಪಸ್​ ಬರುವಷ್ಟರಲ್ಲಿ ಮನನೊಂದ ಮಾಲತೇಶ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದ್ದು, ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

6 ತಿಂಗಳ ಕೂಸು ಲೆಕ್ಕಿಸದ ಮಾಲತೇಶ...

ಮಾಲತೇಶ ದಂಪತಿಗೆ ಎರಡು ಮಕ್ಕಳಿದ್ದು ಒಂದು ಮಗು ಜನಿಸಿ ಈಗ 6 ತಿಂಗಳು ಕೆಳೆದಿದೆ. ಪತ್ನಿ ಗೀತಾ ತವರು ಮನೆಗೆ ಹೋಗಿ ತಾಯಿಯಿಂದ ಕೇಳಿ ಹಣ ತರುವೆ ಎಂದು ಮಕ್ಕಳನ್ನು ಕರೆದುಕೊಂಡು ಹೋಗಿದ್ದಳು. ಆದರೆ, ಆಕೆ ವಾಪಸ್​ ಬರುವಷ್ಟರಲ್ಲಿ ಮನೆ ಮುಂದೆ ತುಂಬಿದ್ದ ಜನರನ್ನು ನೋಡಿ ಗಾಬರಿಯಿಂದ ಬಂದ ಗೀತಾಳಿಗೆ ಪತಿ ನೇಣು ಬಿಗಿದುಕೊಂಡಿದ್ದನ್ನು ಕಂಡು ಗೋಳಾಡಿ ಕಣ್ಣೀರು ಹಾಕಿದಳು. ಮಕ್ಕಳ ಕಣ್ಣೀರು ಹಾಗೂ ಕುಟುಂಬದವರ ರೋದನೆ ನೋಡಿ ನೆರೆದವರ ಕಣ್ಣುಗಳು ತೇವವಾಗಿದ್ದವು.

ನಿತ್ಯ ಪಿಡಿಸುತ್ತಿದ್ದ ಸಾಲಗಾರರು...

ಮಾಲತೇಶ ಹಾಗೂ ಗೀತಾ ದಂಪತಿಗೆ ಸಾಲಗಾರರು ನಿತ್ಯವೂ ಮನೆಗೆ ಬಂದು ಸಾಲದ ಕಂತುಗಳನ್ನು ತುಂಬುವಂತೆ ಪೀಡಿಸುತ್ತಿದ್ದರು. ಇತ್ತೀಚಿನ ದಿನದಲ್ಲಿ ದುಡಿಮೆ ಕೂಡ ಅಷ್ಟಕಷ್ಟೇ ಆಗಿದ್ದರಿಂದ ಸಾಲ ತುಂಬುವುದು ದಂಪತಿಗೆ ಕಷ್ಟವಾಗಿತ್ತು. ಆದರೂ ಕಂತುಗಳನ್ನುತುಂಬುತ್ತ ಬಂದಿದ್ದರು. ಆದರೆ, ಸಾಲಗಾರರ ಕಾಟ ವಿಪರೀತ ಆಗಿದ್ದರಿಂದ ಹಾಗೂ ಪತ್ನಿ ತವರು ಮನೆಗೆ ಹಣ ತರುವ ಸ್ಥಿತಿ ಎದುರಾಯಿತಲ್ಲ ಎಂದು ಮನನೊಂದ ಮಾಲತೇಶ ನೇಣಿಗೆ ಶರಣಾಗಿದ್ದಾನೆ ಎಂದು ಕುಟುಂಬದವರು ಕಣ್ಣೀರು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net