

ಹಾವೇರಿ: ಮೈಕ್ರೋ ಫೈನಾನ್ಸ್ನಲ್ಲಿ ಕ್ರೇಡಿಟ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಮಂಜುನಾಥ ನಗರದಲ್ಲಿ ಗುರುವಾರ ನಡೆದಿದೆ.
ದಾವಣಗೆರೆಯ ನಿಟ್ಟವಳ್ಳಿ ಗ್ರಾಮದ ಕಿರಣಕುಮಾರ ಪರಶುರಾಮ ರಾವ್ (25) ಮೃತ ವ್ಯಕ್ತಿ.
ಈತ ನಗರದ ಮೈಕ್ರೋ ಫೈನಾನ್ಸ್ವೊಂದರಲ್ಲಿ ಕ್ರೀಡಿಟ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ. ಯಾವುದೋ ಕಾರಣದಿಂದ ಮನೆಯಲ್ಲಿಯೆ ನೇಣು ಬಿಇದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.