

ಬೆಂಗಳೂರು ಕರ್ನಾಟಕ ಕಿರು ಬಂಡವಾಳ ಸಂಸ್ಥೆಗಳ ಸಂಘದ (ಎಕೆಎಂಐ) ವತಿಯಿಂದ ಸೆ.12ರಂದು ‘ದಿ ಮೈಕ್ರೋ ಫೈನಾನ್ಸ್ ಕರ್ನಾಟಕ ಶೃಂಗಸಭೆ’ಯನ್ನು ಹಮ್ಮಿಕೊಂಡಿದೆ.
ಅಂದು ಸಂಜೆ 4 ಗಂಟೆಗೆ ನಗರದ ಅಶೋಕ ಹೋಟೆಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ಚಾಲನೆ ನೀಡಲಿದ್ದಾರೆ. ನಬಾರ್ಡ್ ಮಾಜಿ ಮುಖ್ಯ ವ್ಯವಸ್ಥಾಪಕ ಎನ್. ಶ್ರೀನಿವಾಸನ್ ಅವರ ‘ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್-ಸೆಕ್ಟರ್ ರಿಪೋರ್ಟ್-2023’ ಎಂಬ ಅಧ್ಯಯನ ಪುಸ್ತಕವನ್ನು ಅನಾವರಣಗೊಳಿಸಲಿದ್ದಾರೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಬೆಳವಣಿಗೆ, ನಾವಿನ್ಯತೆ ಮತ್ತು ಭವಿಷ್ಯದ ನಿರೀಕ್ಷೆಗಳ ಕುರಿತು ಉದ್ಯಮದ ತಜ್ಞರು ಚರ್ಚಿಸಲಿದ್ದಾರೆ. ರಾಜ್ಯದಲ್ಲಿ 7 ಜಿಲ್ಲೆಗಳಲ್ಲಿನ ಮೈಕ್ರೋ ಫೈನಾನ್ಸ್ ಸಮೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಎರಡೂವರೆ ದಶಕಗಳ ಕಿರು ಬಂಡವಾಳ ಕಾರ್ಯಾಚರಣೆಗಳ ಸಾಮಾಜಿಕ- ಆರ್ಥಿಕ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದು ಮತ್ತು ಗ್ರಾಹಕರ ಅಗತ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಸಮೀಕ್ಷೆಯ ಉದ್ದೇಶವಾಗಿದೆ ಎಂದು ತಿಳಿಸಿದೆ.
ಗ್ರಾಹಕರನ್ನು ರಕ್ಷಣೆ ಮಾಡುವುದು, ಎಲ್ಲ ಪಾಲುದಾರರೊಂದಿಗೆ ಬಲವಾದ ಸಂಬಂಧವನ್ನು ನಿರ್ಮಿಸುವ ಮೂಲಕ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಮಧ್ಯಸ್ಥಗಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ರಾಜ್ಯಾದ್ಯಂತ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬೆಂಬಲಿತ ಸದಸ್ಯರನ್ನು ಬಲಪಡಿಸುವುದು ಎಂದು ಎಕೆಎಂಐ ಅಧ್ಯಕ್ಷ ವೆಂಕಟೇಶ್ ಎನ್. ತಿಳಿಸಿದ್ದಾರೆ.