

ಮಡಿಕೇರಿ:
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ಗಳ ಕಿರುಕುಳ ತಡೆಗೆ ಕಠಿಣ ಕಾನೂನು ತರುವುದಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ. ಶನಿವಾರ ವಿರಾಜಪೇಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ಮೈಕ್ರೋ ಫೈನಾನ್ಸ್ಗಳ ಕಿರುಕುಳಕ್ಕೆ ಸಂಬAಧಿಸಿದAತೆ ಶುಕ್ರವಾರ ಸಚಿವ ಸಂಪುಟ ಸಭೆ ನಡೆದಿದೆ. ಸರ್ಕಾರ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಕಠಿಣವಾದ ಕಾನೂನು ತರುವುದಕ್ಕೆ ನಿರ್ಧಾರ ಆಗಲಿದೆ. ಎಲ್ಲಾ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದೆ ಈ ರೀತಿ ಅನಾಹುತ ಆಗದಂತೆ ಕ್ರಮವಾಗಲಿದೆ. ಇಂಥ ಸಮಸ್ಯೆಗಳನ್ನು ತಪ್ಪಿಸುವುದಕ್ಕಾಗಿಯೇ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುತ್ತಿತ್ತು. ಸಹಕಾರ ಸಂಘಗಳ ಮೂಲಕ ಸಾಲ ಕೊಡಲಾಗುತ್ತಿದ್ದರೂ ಜನರು ಈ ರೀತಿ ಫೈನಾನ್ಸ್ಗಳಿಂದ ಸಾಲ ತೆಗೆದುಕೊಳ್ಳುತ್ತಿದ್ದಾರೆ.
ಈ ರೀತಿ ಸಾಲ ತೆಗೆದುಕೊಳ್ಳಬಾರದೆಂದು ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಅನುದಾನ ಕೊಡುತ್ತಿದೆ. ಆದರೂ ಕೆಲವರು ಈ ರೀತಿ ಸಾಲ ತೆಗೆದುಕೊಂಡು ಸಮಸ್ಯೆ ಆಗುತ್ತಿದೆ. ಹಾಗಾಗಿ ಮೈಕ್ರೋ ಫೈನಾನ್ಸ್ಗಳಿಂದ ಆಗುತ್ತಿರುವ ತೊಂದರೆ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ವಿಪಕ್ಷಗಳನ್ನು ಅಸ್ಥಿರಗೊಳಿಸುತ್ತಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು. ಅಸ್ಥಿರಗೊಳಿಸುತ್ತಿದ್ದಾರೆ ಅಂತ ಮಾತನಾಡುವ ಕುಮಾರಸ್ವಾಮಿ ಅವರಿಗೆ ನಾಚಿಕೆ ಆಗಬೇಕು. ದೇಶದಲ್ಲಿ ಅಸ್ಥಿರ ಅಂತ ತಂದಿದ್ದೇ ಬಿಜೆಪಿಯವರು.
ಕರ್ನಾಟಕ ಸೇರಿದಂತೆ ಆಪರೇಷನ್ ಅನ್ನುವ ಶಬ್ಧ ತಂದಿದ್ದೇ ಬಿಜೆಪಿ. ಅವರ ಜೊತೆಗೆ ಸೇರಿಕೊಂಡಿರುವ ಕುಮಾರಸ್ವಾಮಿ ಹೀಗೆ ಹೇಳುತ್ತಿದ್ದಾರೆ ಎಂದು ಹೇಳಿದರು.