ಭೂಮಿಗೆ ಅನಾರೋಗ್ಯವಾದರೆ ಜೀವಸಂಕುಲಕ್ಕೆ ಆಪತ್ತು

UDP-15-1-Seminar
Published on

ಉಡುಪಿ: ಅಭಿವೃದ್ಧಿ ನೆಪದಲ್ಲಿ ಅಪಾರ ಪ್ರಮಾಣದಲ್ಲಿ ಜೀವವೈವಿಧ್ಯವನ್ನು ನಮಗರಿವಿಲ್ಲದಂತೆಯೇ ನಾಶ ಮಾಡುತ್ತಿದ್ದೇವೆ. ಅನೇಕ ಕಾರಣಗಳಿಗಾಗಿ ಜಲಮೂಲಗಳಾದ ಕೆರೆ&ತೊರೆ, ಗಿಡ&ಮರಗಳು ಬಲಿಯಾಗುತ್ತಿದ್ದು ಭೂಮಿ ಅನಾರೋಗ್ಯಕ್ಕೆ ತುತ್ತಾಗುತ್ತಿದೆ. ಇದರಿಂದ ಮಾನವ ಸಹಿತ ಸಕಲ ಜೀವರಾಶಿಗಳಿಗೆ ಆಪತ್ತು ಎದುರಾಗುತ್ತಿದೆ ಎಂದು ಬೆಂಗಳೂರಿನ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆ್​ ಸೈನ್ಸ್​ನ ಕುಮಟಾ ಶಾಖೆಯ ಸಲಹಾ ವಿಜ್ಞಾನಿ ಡಾ.ಎಂ.ಡಿ.ಸುಭಾಶ್​ ಚಂದ್ರನ್​ ಅಭಿಪ್ರಾಯಪಟ್ಟರು.

ಉಡುಪಿ ಎಂಜಿಎಂ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ "ಜೀವ ವೈವಿಧ್ಯ ಸಂರಕ್ಷಣೆ; ಮಾನವ ಹಸ್ತಕ್ಷೇಪ&ಹವಾಮಾನ ಬದಲಾವಣೆ' ವಿಷಾಯಾಧಾರಿತ ಎರಡು ದಿನಗಳ "ಬಯೋಸೆಮ್​ 2ಕೆ24' ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಮಣಿಪಾಲ ಎಜಿಇ ಕಾರ್ಯದರ್ಶಿ ಬಿ.ಪಿ. ವರದಾಜರಾಜ ಪೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಸಮುದಾಯ ಜೀವವೈವಿಧ್ಯತೆ ಕುರಿತು ಅರಿತುಕೊಳ್ಳಬೇಕಿದೆ. ವಿದ್ಯಾರ್ಜನೆಯ ಅವಧಿಯಲ್ಲೇ ಪ್ರಕೃತಿ ರಕ್ಷಣೆ ಕುರಿತು ಅರಿವು ಹೊಂದಬೇಕಿದೆ ಎಂದರು.

ಪ್ರೊ.ದೇವದಾಸ್​ ನಾಯಕ್​, ಐಕ್ಯುಎಸಿ ಸಂಚಾಲಕಿ ಶೈಲಜಾ, ಸಹಾಯಕ ಪ್ರಾಧ್ಯಾಪಕಿ ಪ್ರವಿಣಾಕುಮಾರಿ ಎಂ.ಕೆ. ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ.ಲಕ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಪಲ್ಲವಿ ಹಾಗೂ ತಂಡ ಪ್ರಕೃತಿಯ ಕುರಿತು ಹಾಡಿದರು. ಜಿಯಾಲಜಿ ಎಚ್​ಒಡಿ ಡಾ. ಮನೀತಾ ಟಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಬಾಟನಿ ಎಚ್​ಒಡಿ ಡಾ. ಶುೃತಿ ನಾಯಕ್​ ವಂದಿಸಿದರು. ಯಶಸ್ವಿನಿ ಬಿ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net