ವಿದ್ವತ್ತು-ಶ್ರದ್ಧೆ ಮಿಳಿತಗೊಂಡ ಅನುಭವಿ ಕೆಪಿ ರಾವ್​: ಜಯಂತ್​ ಕಾಯ್ಕಿಣಿ

udp-6-kp rao
Published on

ಉಡುಪಿ: ಚಿಂತನಶೀಲತೆ ಇಲ್ಲದ ತನ್ಮಯತೆ ಮತ್ತು ತನ್ಮಯತೆ ಇಲ್ಲದೆ ಚಿಂತನಶೀಲನೆ ಎರಡೂ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ಅವಲೋಕಿಸಿದರೆ ನಾಡೋಜ ಕೆ.ಪಿ. ರಾವ್​ ಅವರು ವಿದ್ವತ್ತು ಮತ್ತು ಶ್ರದ್ಧೆ ಮುಪು$್ಪರಿಗೊಂಡ ಅನುಭವಿ ಎಂದು ಹಿರಿಯ ಸಾಹಿತಿ ಜಯಂತ್​ ಕಾಯ್ಕಿಣಿ ವಿಶ್ಲೇಷಿಸಿದರು.

ಭಾನುವಾರ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ ನಾಡೋಜ ಪ್ರೊ. ಕೆ. ಪಿ. ರಾವ್​ ಅಭಿನಂದನ ಸಮಿತಿ ವತಿಯಿಂದ ನಡೆದ ಕೆ.ಪಿ. ರಾವ್​ ಅಭಿನಂದನ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು.

ಕೆಪಿ ರಾವ್​ ಬಾಲ್ಯದಲ್ಲಿ 7 ಮತ್ತು 8ನೇ ತರಗತಿ ಪಾಠಗಳನ್ನು ಯಕ್ಷಗಾನ ಶೈಲಿಯಲ್ಲಿ ಓದಿಕೊಂಡು ಕಂಠಪಾಠ ಮಾಡಿ ಪುಸ್ತಕಗಳನ್ನು ವಾಪಾಸು ನೀಡುತ್ತಿದ್ದರು. ಧಾರವಾಹಿ ರೀತಿಯಲ್ಲಿ ಏಕತಾನತೆಯ ಜೀವನವನ್ನು ನಡೆಸದೆ ಸಂಗೀತ, ಸಿನೆಮಾ, ವಿಜ್ನಾನ ಹೀಗೆ ಪ್ರತಿ ಕ್ಷೇತ್ರದಲ್ಲೂ ಅಸಕ್ತಿ ವಹಿಸಿ ವೈಶಿಷ್ಟ$್ಯಪೂರ್ಣ ಬದುಕು ನಡೆಸಿದ್ದರು. ನಾವೆಲ್ಲ ಕಂಪ್ಯೂಟರ್​ ಶಬ್ದ ಕೇಳುವ ಹೊತ್ತಿನಲ್ಲಿ 80ರ ದಶಕದಲ್ಲೇ ಮನೆಯ ಬೆಡ್ರೂಂನಲ್ಲಿ 5 ಕಂಪ್ಯೂಟರ್ಗಳನ್ನು ಹೊಂದಿದ್ದ ಕೆಪಿ ರಾವ್​ ಅವರು ಪ್ರತಿಯೊಂದನ್ನು ಬಿಚ್ಚಿಟ್ಟು ಮರು ಜೋಡಿಸುತ್ತಿದ್ದರು. ಪ್ರತಿ ವಿಚಾರವನ್ನೂ ಕುತೂಹಲಕಾರಿಯಾಗಿ ವೀಸುವ ಸ್ವಭಾವದವರಾಗಿದ್ದರು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾಡೋಜ ಕೆ.ಪಿ. ರಾವ್​ ಅವರು, ದೇವರು ಮತ್ತು ಭಾಷೆ ಕಣ್ಣಿಗೆ ಕಾಣುವುದಿಲ್ಲ. ಹಿಡಿತಕ್ಕೆ ಸಿಗುವುದಿಲ್ಲ. ಅದರೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಶಕ್ತಿ ಭಾಷೆ ಮತ್ತು ದೇವರಿಗಿದೆ. ಪ್ರಾಣಿ ಸಂಕುಲ ಭಾಷೆ ಕಲಿಯುವುದು ಮೊದಲಿಗೆ ತಾಯಿಯಿಂದ. ಪರಸ್ಪರ ಅರ್ಥಮಾಡಿಕೊಳ್ಳಲು ಇರುವ ಮಾಧ್ಯಮ ಭಾಷೆ. ಎಲ್ಲರನ್ನು ಒಳಗೊಳ್ಳುವಂತಹ ಶಕ್ತಿ ಭಾಷೆಗಿದೆ ಎಂದರು.

ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ವಿಶ್ವನಾಥ ಶೆಣೈ, ಸಾಹಿತಿ ಮುರಳೀಧರ ಉಪಾಧ್ಯ ಹಿರಿಯಡ್ಕ, ಅರ್​ಅರ್​ ಸಿ ನಿರ್ದೇಶಕ ಡಾ. ಜಗದೀಶ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ. ಉಪಸ್ಥಿತರಿದ್ದರು. ಮುರಳೀ ಕಡೆಕಾರ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net