

ಹುಬ್ಬಳ್ಳಿ: ದೇಶದಲ್ಲಿ ಗ್ರೀನ್ ಮೊಬಿಲಿಟಿ ಅದರಲ್ಲೂ ಇಲೆಕ್ಟ್ರಿಕ್ ವೆಹಿಕಲ್ ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಮೋರಿಸ್ ಗ್ಯಾರೇಜಿಸ್ (ಎಂಜಿ) ಕಂಪನಿಯು ಎರಡು ಹೊಸ ಮಾದರಿಯ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಸಾಮಾನ್ಯ ಚಾರ್ಜಿಂಗ್ ಹಾಗೂ ವೇಗವಾಗಿ ಚಾರ್ಜಿಂಗ್ ಮಾಡಬಹುದಾದ ಎಂಜಿ ಕಾಮೆಟ್ ಇವಿ ಎರಡು ಕಾರುಗಳನ್ನು ಇಲ್ಲಿಯ ರಾಯಾಪುರದಲ್ಲಿರುವ ಎಂಜಿ ಶೋರೂಮ್ ನಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಂಜಿ ಮೋಟಾರ್ಸ್ ಶೋರೂಂ ಮ್ಯಾನೇಜರ್ ರಾವೇಂದ್ರ ರೇವಣಕರ, ನೂರು ವರ್ಷದ ಇತಿಹಾಸ ಹೊಂದಿರುವ ಎಂಜಿ ಕಂಪನಿಯು ಗ್ರೀನ್ ಮೊಬಿಲಿಟಿಗೆ ಆದ್ಯತೆ ನೀಡುತ್ತಿದೆ. ಸ್ಮಾರ್ಟ್ ಹಾಗೂ ಸಸ್ಟನೇಬಲ್ ಎಂಜಿ ಕಾಮೆಟ್ ಇವಿ ಮತ್ತು ಝೆಡ್ಇವಿ ಡೆವ್ ಈಗ ಕರ್ನಾಟಕದ ಹುಬ್ಬಳ್ಳಿ ಧಾರವಾಡಕ್ಕೂ ಬಂದಿದೆ ಎಂದರು.
ಆಕರ್ಷಕ ಬೆಲೆ ಅಷ್ಟೇ ಅಲ್ಲ, ವೇಗದ ಚಾರ್ಜಿಂಗ್ ಆಯ್ಕೆಯೊಂದಿಗೆ ಎಂಜಿ ಕಾಮೆಟ್ ಸ್ಮಾರ್ಟ್ ಇವಿಗಳು ಇದೀಗ ಐದು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದ್ದು, ನೋಡಲು ಅತ್ಯಾಕರ್ಷಕವಾಗಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಜನರಿಗೆ ಇಷ್ಟವಾಗಿರುವ ಕಾಮೆಟ್ ಇವಿಗಳು ಈಗ ಇನ್ನಷ್ಟು ಅತ್ಯಾಧುನಿಕ ಸವಲತ್ತುಗಳೊಂದಿಗೆ ಮಾರುಕಟ್ಟೆಗೆ ಬಂದಿವೆ.
ಸುರಕ್ಷತೆ, ಕಾರಿನ ಒಳಗಡೆ ಹೆಚ್ಚು ಸ್ಪೇಸ್, ಡಿಜಿಟಲ್ ಲಾಕ್ ಸಿಸ್ಟ್ಂ, ಸುಲಭ ಡೆವ್ಗೆ ಅನುಕೂಲಗಳು, ಕಡಿಮೆ ಜಾಗದಲ್ಲಿ ರ್ಟನ್ ಮಾಡಿಕೊಳ್ಳಬಹುದಾಗಿದ್ದು, ಇವು ಪರಿರ್ಪೂಣ ಸಿಟಿ ಕಾರ್ ಆಗಿವೆ. ಅತ್ಯಂತ ಉತ್ಕಷ್ಟ 17.3 ಕಿ. ವ್ಯಾಟ್ ಬ್ಯಾಟರಿ, 230 ಕಿ.ಮೀ ಮೈಲೇಜ್, 2 ಏರ್ಬ್ಯಾಗ್, 20.4 ಸೆ.ಮೀ ಟಚ್ ಸ್ಕ್ರೀನ್ ಸೌಕರ್ಯ ಹೊಂದಿವೆ ಎಂದು ಎಂಜಿ ಬಿಜಿನೆಸ್ ಹೆಡ್ ಮಹಾದೇವ ಬೆಲ್ಲದ ಅವರು ಮಾಹಿತಿ ನೀಡಿದ್ದಾರೆ.
ಇಂದಿನ ಪೆಟ್ರೋಲ್, ಡೀಸೆಲ್ ದರಗಳ ಏರಿಕೆ ಸಂದರ್ಭದಲ್ಲಿ ಇವಿ ವೆಹಿಕಲ್ಗಳಿಗೆ ಬಲು ಬೇಡಿಕೆ ಬರುತ್ತಿದ್ದು, ಗ್ರಾಹಕರು ವಿಶ್ವಾಸದಿಂದ ಎಂಜಿ ವೆಹಿಕಲ್ ಬಳಸಬಹುದು ಎಂದು ಅವರು ಹೇಳಿದರು.
ಇವಿ ಎಕ್ಸಫರ್ಟ್ ಅಲಿಶಾ ಬಿ, ಶಿವಕುಮಾರ, ಮಂಜುನಾಥ ದೇಶಪಾಂಡೆ, ನವೀನ ಚಿನ್ನದಕೈ ಗೋಷ್ಠಿಯಲ್ಲಿದ್ದರು.