

ಬೆಂಗಳೂರು: ರಾಜಧಾನಿಯಿಂದ ತಮಿಳುನಾಡುತನಕ ಮೆಟ್ರೋ ವಿಸ್ತರಣೆ ಕುರಿತ ವಿಚಾರಕ್ಕೆ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಕನ್ನಡಿಗರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತೀಚೆೆಗೆ ತಮಿಳುನಾಡಿನಲ್ಲಿ ಮೆಟ್ರೋ ಸಂಚಾರ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾಗ, ಸಿಎಂ ಜೋಸಫ್ ವಿಜಯ್ ಮನವಿ ಸಲ್ಲಿಸಿ, ತಮಿಳುನಾಡಿನ ಹೊಸೂರು ಮತ್ತು ಕರ್ನಾಟಕ ರಾಜ್ಯದ ಬೊಮ್ಮಸಂದ್ರ ನಡುವಿನ ಅಂತಾರಾಜ್ಯ ಮೆಟ್ರೋ ರೈಲು ಸಂಪರ್ಕ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಈ ವಿಷಯಕ್ಕೆ ‘ಎಕ್ಸ್’ ಖಾತೆಯಲ್ಲಿ, ‘ಕನ್ನಡಿಗರೇ ಎಚ್ಚರ. ಬೊಮ್ಮಸಂದ್ರದಿಂದ ಮುಂದಕ್ಕೆ ಮೆಟ್ರೊ ರೈಲು ಬೇಡ. ಭವಿಷ್ಯದಲ್ಲಿ 300 ಕಿ.ಮೀ. ಮೀರಿ ಮೆಟ್ರೊ ಬೆಳೆಯುತ್ತದೆ. ತಮಿಳುನಾಡಿನವರು ಹೊಸೂರಿನಿಂದ ಅತ್ತಿಬೆಲೆಯವರೆಗೆ ಕೇವಲ 11 ಕಿ.ಮೀ. ಮೆಟ್ರೊ ರೈಲು ಸಂಪರ್ಕ ಹೊಂದಲಿದ್ದಾರೆ. ಇದು ಮುಂದಿನ ದಿನಗಳಲ್ಲಿ ಬೆಂಗಳೂರು ಐಟಿ- ಬಿಟಿ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ವ್ಯಕ್ತಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಹೊಸೂರಿನಲ್ಲಿ ಐಟಿ ಪಾರ್ಕ್ಗಾಗಿ 500 ಎಕರೆ ಜಮೀನನ್ನು ಅಲ್ಲಿನ ಸರ್ಕಾರ ಕಾಯ್ದಿರಿಸಿದೆ. ಅವರಿಗೆ ಮೆಟ್ರೋ ಸಂಪರ್ಕ ಸಿಕ್ಕಿದರೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಐಟಿ ಕಂಪನಿಗಳನ್ನು ಆಕರ್ಷಿಸುವ ಸಾಧ್ಯತೆ ಇದೆ. ಇದರಿಂದ ತಮಿಳುನಾಡಿಗೆ ಸಂಪೂರ್ಣ ಲಾಭವಾಗಿ ಬೆಂಗಳೂರಿ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.