ಹೊಸ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಶೀಘ್ರ

metro new
metro
Published on

ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಮೊದಲ ಮಾರ್ಗದ ಉದ್ಘಾಟನೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ನ. 17ರಿಂದ 19ರವರೆಗೆ ರೈಲ್ವೆ ಸುರಕ್ಷತಾ ಆಯುಕ್ತರು ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್​ಶಿಪ್​ವರೆಗಿನ ಮಾರ್ಗದ ಸುರಕ್ಷತಾ ಪರೀೆ ನಡೆಸಲಿದ್ದಾರೆ.

ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್​ಶಿಪ್​ವರೆಗಿನ ಮಾರ್ಗದ ಕಾಮಗಾರಿ ಮತ್ತು ಪರೀೆಯನ್ನು ಬಿಎಂಆರ್​ಸಿಎಲ್​ ರ್ಪೂಣಗೊಳಿಸಿ 15 ದಿನಗಳಾಗಿವೆ. ಉಳಿದ ಎಲ್ಲ ಪ್ರಕ್ರಿಯೆ ರ್ಪೂಣಗೊಳಿಸಿ ನ. 1ರಿಂದ ವಾಣಿಜ್ಯ ಕಾರ್ಯಾಚರಣೆ ನಡೆಸುವ ಗುರಿ ಹೊಂದಲಾಗಿತ್ತು. ಆದರೆ, ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಸುರಕ್ಷತೆ ಪರೀೆ ನಡೆಸಲು ಮನಸು ಮಾಡದ ಕಾರಣ, ನಿಗದಿ ಮಾಡಲಾಗಿದ್ದ ಗಡುವು ಮೀರುವಂತಾಗಿತ್ತು. ಆದರೀಗ, ನ. 17ರಿಂದ 19ರವರೆಗೆ 6.4 ಕಿ.ಮೀ. ಉದ್ದದ ವಿಸ್ತರಿತ ಮಾರ್ಗದ ಪರೀೆಗೆ ರೈಲ್ವೆ ಸುರಕ್ಷತಾ ಆಯುಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಈ ತಿಂಗಳಾಂತ್ಯಕ್ಕೆ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗುವುದು ಬಹುತೇಕ ಖಚಿತವಾಗಿದೆ.

ಎಲ್ಲ ರೀತಿಯ ಪರೀಕ್ಷೆ ಮುಗಿದಿದೆ: ಯಲಚೇನಹಳ್ಳಿ & ಅಂಜನಾಪುರ ಮಾರ್ಗದಲ್ಲಿ ಆಗಸ್ಟ್​ 27ರಿಂದ ಪರೀಕ್ಷಾರ್ಥ ರೈಲು ಸಂಚಾರ ಆರಂಭಿಸಲಾಗಿತ್ತು. ಥರ್ಡ್​ ರೈಲ್​ ಹಳಿಗಳಿಗೆ ವಿದ್ಯುತ್​ ಪ್ರವಹಿಸುವುದು, ನಿಲ್ದಾಣಗಳು ಮತ್ತು ಮಾರ್ಗದಲ್ಲಿನ ಸಿಗ್ನಲಿಂಗ್​ ವ್ಯವಸ್ಥೆ, ಮಾರ್ಗದಲ್ಲಿ ಸಿಗುವ ತಿರುವುಗಳಲ್ಲಿ ರೈಲು ಸಂಚರಿಸುವ ವೇಗದ ಪರೀಕ್ಷೆಗಳನ್ನು ನಡೆಸಲಾಗಿದೆ. ಜತೆಗೆ 80 ಕಿ.ಮೀ. ವೇಗದಲ್ಲೂ ರೈಲು ಸಂಚರಿಸಿ ಪರೀಕ್ಷೆ ಮಾಡಲಾಗಿದೆ.

ಇಷ್ಟೆಲ್ಲ ಆದ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಸುರಕ್ಷತೆ ಬಗ್ಗೆ ಪರೀಕ್ಷೆ ನಡೆಸಿ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಬೇಕಿತ್ತು. ಅದಕ್ಕಾಗಿ ಬಿಎಂಆರ್​ಸಿಎಲ್​ ಕಳೆದ ತಿಂಗಳ ಆರಂಭದಲ್ಲಿಯೇ ಆಯುಕ್ತರಿಗೆ ಪತ್ರ ಬರೆದು, ಪರೀಕ್ಷೆ ನಡೆಸುವಂತೆ ಮನವಿ ಮಾಡಿತ್ತು. ಆದರೆ, ಆಯುಕ್ತರಿಂದ ಯಾವುದೇ ಉತ್ತರ ಬಂದಿರಲಿಲ್ಲ. ಇದೀಗ ಆಯುಕ್ತರ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಅದಾದ ನಂತರದ ಮೂರ್ನಾಲ್ಕು ದಿನಗಳಲ್ಲಿ ಉಳಿದೆಲ್ಲ ಪ್ರಕ್ರಿಯೆಯನ್ನು ಬಿಎಂಆರ್​ಸಿಎಲ್​ ರ್ಪೂಣಗೊಳಿಸಲಿದೆ. ಹೀಗಾಗಿ ನವೆಂಬರ್​ ಕೊನೆಯ ವಾರದಲ್ಲಿ ರೈಲು ಸಂಚಾರ ಆರಂಭಿಸಲಾಗುತ್ತದೆ.

10 ನಿಮಿಷದ ಪ್ರಯಾಣ: ಪರೀಕ್ಷಾರ್ಥ ಸಂಚಾರದ ವೇಳೆ ಮಾರ್ಗ ಕ್ರಮಿಸುವ ಅವಧಿಯನ್ನು ಲೆಕ್ಕ ಹಾಕಲಾಗಿದೆ. ಅದರಂತೆ 6.4 ಕಿ.ಮೀ. ಉದ್ದದ ಮಾರ್ಗವನ್ನು ಮೆಟ್ರೋ ರೈಲಿನ ಮೂಲಕ 10 ನಿಮಿಷದಲ್ಲಿ ತೆರಳಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್​ಶಿಪ್​ ನಿಲ್ದಾಣದವರೆಗೆ ಪ್ರಯಾಣಿಸಲು 20 ರೂ. ಟಿಕೆಟ್​ ದರ ನಿಗದಿ ಮಾಡುವ ಕುರಿತು ಚಚಿರ್ಸಲಾಗಿದೆ.

ರೈಲು ಸಂಚಾರದಲ್ಲಿ ವ್ಯತ್ಯಯ: ರೈಲ್ವೆ ಸುರಕ್ಷತಾ ಆಯುಕ್ತರು ಪರೀಕ್ಷೆ ನಡೆಸುತ್ತಿರುವ ಕಾರಣದಿಂದ ನ. 17ರಿಂದ 19ರವರೆಗೆ ಆರ್​.ವಿ.ರಸ್ತೆಯಿಂದ ಯಲಚೇನಹಳ್ಳಿ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ಈ ಮೂರು ದಿನಗಳ ಕಾಲ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಗವರೆಗೆ ನಾಗಸಂದ್ರದಿಂದ ಆರ್​.ವಿ.ರಸ್ತೆ ನಿಲ್ದಾಣದವರೆಗೆ ಮಾತ್ರ ಮೆಟ್ರೋ ರೈಲು ಸೇವೆಯಿರಲಿದೆ. ಉಳಿದಂತೆ ನ. 20ರಿಂದ ನಾಗಸಂದ್ರದಿಂದ ಯಲಚೇನಹಳ್ಳಿವರೆಗೂ ರೈಲು ಸಂಚರಿಸಲಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net