ಮೆಟ್ರೋ 2ನೇ ಹಂತವೂ ವಿಳಂಬ?ಸುರಂಗ ಮಾರ್ಗಕ್ಕೆ ಬಂಡೆಗಳು ಅಡ್ಡಿ

metro
Published on

ಬೆಂಗಳೂರು: ಮೆಟ್ರೋ ಮೊದಲ ಹಂತದಂತೆಯೇ 2ನೇ ಹಂತದ ಕಾಮಗಾರಿ ಕೂಡ ಸಾಕಷ್ಟು ವಿಳಂಬವಾಗಲಿದೆ. ಸುರಂಗ ಮಾರ್ಗ ನಿರ್ಮಾಣ ಮಾಡುವ ಸ್ಥಳ ಶೇ. 34 ಭಾಗ ಬಂಡೆಗಳಿಂದ ಆವೃತವಾಗಿದ್ದು, ಕಾಮಗಾರಿ ನಡೆಸುವುದು ಸವಾಲಾಗಿ ಪರಿಣಮಿಸಲಿದೆ.

ನಗರದ ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಬಲ್ಲ ಮೆಟ್ರೋ ರೈಲು ಯೋಜನೆಯ 2ನೇ ಹಂತದ ಕಾಮಗಾರಿ 2023ಕ್ಕೆ ಪೂರ್ಣಗೊಳ್ಳಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಸುರಂಗ ಮಾರ್ಗಕ್ಕೆ ಮಾತ್ರ 2024 ಅಂತಿಮ ಗಡುವಾಗಿದೆ. ಆದರೆ, ಸುರಂಗ ಮಾರ್ಗದ ಕಾಮಗಾರಿಯಲ್ಲಿ ಸಾಕಷ್ಟು ಅಡೆತಡೆಗಳು ಉಂಟಾಗುವ ಸೂಚನೆ ಕಾಣಿಸುತ್ತಿದೆ. ಸುರಂಗ ಮಾರ್ಗ ನಿರ್ವಣದ ಪ್ರದೇಶದಲ್ಲಿನ ಭೌಗೋಳಿಕ ಸ್ಥಿತಿ ಕುರಿತಂತೆ ಬಿಎಂಆರ್​ಸಿಎಲ್ ಸಿದ್ಧಪಡಿಸಿರುವ ಅಧ್ಯಯನದ ವರದಿಯಂತೆ ಶೇ. 34 ಭಾಗ ಗಟ್ಟಿ ಬಂಡೆಗಳಿಂದ ಆವೃತವಾಗಿದೆ ಎಂದು ತಿಳಿದುಬಂದಿದೆ. ಇದರಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನವಾಗಿದೆ.

14 ಕಿ.ಮೀ. ಉದ್ದ: ಮೆಟ್ರೋ 2ನೇ ಹಂತದಲ್ಲಿನ ಗೊಟ್ಟಿಗೆರೆಯಿಂದ ನಾಗವಾರವರೆಗಿನ 22.87 ಕಿ.ಮೀ. ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರವರೆಗಿನ 14 ಕಿ.ಮೀ. ಉದ್ದದ ಮಾರ್ಗದಲ್ಲಿ ಸುರಂಗ ನಿರ್ವಿುಸಲಾಗುತ್ತಿದೆ. ಭೌಗೋಳಿಕ ಪರಿಸ್ಥಿತಿ ಬಗ್ಗೆ ನಡೆಸಿರುವ ಅಧ್ಯಯನದಂತೆ ಶೇ.34 ಗಟ್ಟಿ ಬಂಡೆ, ಶೇ.20 ಮಣ್ಣು ಮತ್ತು ಕಲ್ಲುಗಳು ಹಾಗೂ ಶೇ. 46 ಮಣ್ಣಿನಿಂದ ಆವೃತವಾದ ಪ್ರದೇಶವಿದೆ.

ಕಾಮಗಾರಿ ಮೇಲೆ ಪರಿಣಾಮ: ಸುರಂಗ ಮಾರ್ಗ ನಿರ್ವಣಕ್ಕೆ ಒಟ್ಟು 6 ಟನಲ್ ಬೋರಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ಪ್ರತಿ ಯಂತ್ರ ಮಣ್ಣಿನಿಂದ ಆವೃತವಾದ ಪ್ರದೇಶದಲ್ಲಿ ದಿನಕ್ಕೆ 5 ಮೀ. ಉದ್ದದ ಸುರಂಗ ಕೊರೆಯಲಿವೆ. ಆದರೆ ಬಂಡೆ ಇರುವೆಡೆ 2ರಿಂದ 2.5 ಮೀ. ಸುರಂಗ ನಿರ್ಮಾಣ ಸಾಧ್ಯವಾಗಲಿದೆ.

ಮಾರ್ಚ್​ನಿಂದ ಕಾಮಗಾರಿ

ವೆಲ್ಲಾರ ಜಂಕ್ಷನ್​ನಿಂದ ಶಿವಾಜಿನಗರದವರೆಗೆ 2.7 ಕಿ.ಮೀ. ಹಾಗೂ ಶಿವಾಜಿನಗರದಿಂದ ಪಾಟರಿ ಟೌನ್​ವರೆಗಿನ 2.8 ಕಿ.ಮೀ. ಸುರಂಗ ಮಾರ್ಗ ನಿರ್ವಿುಸಲು ಯೋಜನೆ ರೂಪಿಸಲಾಗಿದೆ. ಕಾಮಗಾರಿಗಾಗಿ ಟನಲ್ ಬೋರಿಂಗ್ ಯಂತ್ರಗಳನ್ನು ಇಳಿಸಲು ಬೇಕಾಗುವ ಶಾಫ್ಟ್ (ವೃತ್ತಾಕಾರದ ಗುಂಡಿ) ಅನ್ನು ಶಿವಾಜಿನಗರ ಮತ್ತು ದಂಡು ರೈಲ್ವೆ ನಿಲ್ದಾಣದ ಬಳಿ ನಿರ್ವಿುಸಲಾಗುತ್ತಿದೆ. ಚೀನಾದಿಂದ 4 ಟನಲ್ ಬೋರಿಂಗ್ ಯಂತ್ರ ತರಿಸಲಾಗುತ್ತಿದ್ದು, 2 ಯಂತ್ರಗಳು ಮಾಸಾಂತ್ಯದಲ್ಲಿ ಬೆಂಗಳೂರು ತಲುಪಲಿವೆ. ಮಾರ್ಚ್​ನಿಂದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.

ತನಿಖಾ ವರದಿ ನೀಡಲು ಸಿಐಡಿಗೆ ಸೂಚನೆ

ಬೆಂಗಳೂರು: ರಾಜ್ಯಾದ್ಯಂತ 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿಗೆ ಮಾ.7ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ. ರಾಜ್ಯದಲ್ಲಿ ಬಾಲ ನ್ಯಾಯ (ಮಕ್ಕಳ ಕಾಳಜಿ ಹಾಗೂ ಸುರಕ್ಷತೆ) ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ‘ಬಚಪನ್ ಬಚಾವೋ’ ಸ್ವಯಂಸೇವಾ ಸಂಸ್ಥೆ ದಾಖಲಿಸಿರುವ ಪಿಐಎಲ್ ವಿಚಾರಣೆಯನ್ನು ವಿಭಾಗೀಯ ಪೀಠ ಶುಕ್ರವಾರ ನಡೆಸಿತು. ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಆದೇಶಿಸಿತು. ಲಲಿತಾಕುಮಾರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಆಧರಿಸಿ ಪೊಲೀಸ್ ಅಧಿಕಾರಿಗಳಿಗೆ ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಹೇಗೆ ನಡೆದುಕೊಳ್ಳಬೇಕು, ಹೇಗೆ ತನಿಖೆ ನಡೆಸಬೇಕು ಎಂಬ ಬಗ್ಗೆ ಯಾವ ರೀತಿಯ ಪುನರ್ ಮನನ ಕಾರ್ಯಕ್ರಮ ಆಯೋಜಿಸಲಾಗುವುದು ಎಂಬುದನ್ನು ಮುಂದಿನ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರ ಸೂಚಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net