ವಿಪ ಸದಸ್ಯ ಕೊಟ್ಟ ಮಾಸ್ಕ್ ವಿತರಿಸಿದ ನಾಡಗೌಡರು

MBL 25-2
Published on

ಮುದ್ದೇಬಿಹಾಳ: ವಿಧಾನಪರಿಷತ್ ಸದಸ್ಯ ನಾಸೀರ್‌ಅಹ್ಮದ್ ಅವರು ನೀಡಿದ ಅಂದಾಜು 3000 ಮಾಸ್ಕ್‌ಗಳನ್ನು ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ ಶನಿವಾರ ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಡಾ. ಸತೀಶ ತಿವಾರಿ, ಡಾ. ಅನಿಲಕುಮಾರ ಶೇಗುಣಸಿ ಅವರಿಗೆ ಹಾಗೂ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಐ ಆನಂದ ವಾಘಮೋಡೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ ಅವರಿಗೆ ವಿತರಿಸಿದರು.
ಕರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವ ಒತ್ತೆ ಇಟ್ಟು ದುಡಿಯುತ್ತಿರುವ ಪೊಲೀಸರು, ವೈದ್ಯರಿಗೆ ಮಾಜಿ ಸಚಿವ ನಾಡಗೌಡರು ಕೈ ಮುಗಿದು ಅಭಿನಂದನೆ ಹೇಳಿದರು.
ಪಕ್ಷದ ಮುಖಂಡರಾದ ಎಸ್.ಜಿ. ಪಾಟೀಲ ಶೃಂಗಾರಗೌಡ್ರು, ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಪುರಸಭೆ ಸದಸ್ಯ ಮಹಿಬೂಬ್ ಗೊಳಸಂಗಿ, ಮುಖಂಡ ಚಿನ್ನು ನಾಡಗೌಡ, ಮಾಜಿ ಸದಸ್ಯ ಎಚ್.ಬಿ. ಸಾಲಿಮನಿ, ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಮಹ್ಮದರಫೀಕ್ ಶಿರೋಳ, ಎಪಿಎಂಸಿ ಉಪಾಧ್ಯಕ್ಷ ಹಣಮಂತ ನಾಯ್ಕಮಕ್ಕಳ, ನಾಗರಾಜ ತಂಗಡಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net