ಗದಗ: ನರಗುಂದದಲ್ಲಿ ಮೀಟರ್ ಬಡ್ಡಿ ಹಾವಳಿ: ತುಂಬು ಗರ್ಭಿಣಿಗೆ ಸಾಲಗಾರರಿಂದ ಪ್ರತಿನಿತ್ಯ ತೊಂದರೆ

scan0001
Published on

ಶಿವಾನಂದ ಹಿರೇಮಠ ಗದಗ
ಜಿಲ್ಲೆಯ ಸಮಾನ್ಯ ಕಟುಂಬವೊಂದು ಪಡೆದ ಸಾಲಕ್ಕೆ ಮೀಟರ್​ ಬಡ್ಡಿ ಕಟ್ಟುತ್ತ ಬಸವಳಿದಿದೆ. ಸಾಲಗಾರರ ಮೀಟರ್​ ಬಡ್ಡಿ ಕಾಟಕ್ಕೆ ಮನೆ ಯಜಮಾನ ಮನೆಯಿಂದ ಪರಾರಿ ಆಗಿದ್ದು, ಪತ್ನಿ ತುಂಬು ಗರ್ಭಿಣಿ ಎನ್ನದೇ ಸಾಲಗಾರರು ತೊಂದರೆ ನೀಡುತ್ತಿದ್ದಾರೆ. ಏರು ಧ್ವನಿಯಲ್ಲಿ ನಿಂದಿಸುತ್ತಿದ್ದಾರೆ. ಪ್ರಕರಣದಿಂದ ಬೇಸತ್ತ ಗರ್ಭಿಣಿಯು ಕಣ್ಣೀರಿಡತ್ತ ಪೊಲೀಸ್​ ಇಲಾಖೆ ಕದ ತಟ್ಟಿದ್ದಾರೆ. ಗುರುವಾರ ಕಣ್ಣಿರಿಡುತ್ತ ಜಿಲ್ಲಾ ಪೊಲೀಸ್​ ಕಚೇರಿಗೆ ಆಗಮಿಸಿದ್ದ ಗರ್ಭಿಣಿ ಶಿಲ್ಪಾ, ಶುಕ್ರವಾರ ನರಗುಂದು ಪೊಲೀಸ್​ ಠಾಣೆಯಲ್ಲಿ ಮೀಟರ್​ ಬಡ್ಡಿ ಸಾಲಗಾರರ ಚಿತ್ರಹಿಂಸೆಯಿಂದ ರಕ್ಷಣೆ ಕೋರಿ ದೂರು ಸಲ್ಲಿಸಿದ್ದಾರೆ.

ಏನಿದು ಪ್ರಕರಣ?
ಜಿಲ್ಲೆಯ ನರಗುಂದ ಪಟ್ಟಣದ ಶಿಲ್ಪಾ ವರ್ಣೇಕರ್​ ಎಂಬುದು ಚಿಕ್ಕದಾದ ಜುವ್ಯಲರಿ ಶಾಪ್​ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ ವ್ಯವಹಾರದ ಅನಿವಾರ್ಯತೆಗಾಗಿ ಆಗಾಗ ಸ್ಥಳಿಯರಿಂದ ಬಡ್ಡಿ ಸಾಲ ಪಡೆಯುತ್ತಿದ್ದರು ಎನ್ನಲಾಗಿದೆ. ಕಳೆದ ಹಲವು ತಿಂಗಳಿಂದ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆ ಬಡ್ಡಿ ಕಟ್ಟಲು ಸಾಧ್ಯವಾಗಿಲ್ಲ. ಸಾಲಗಾರರ ಕಾಟಕ್ಕೆ ಶಿಲ್ಪಾ ವರ್ಣೆಕರ್​ ಅವರ ಪತಿ ಮನೆ ಬಿಟ್ಟು ಹೋಗಿದ್ದಾರೆ. ತೆಗೆದುಕೊಂಡ ಸಾಲಕ್ಕೆ ಮೂರು ಪಟ್ಟು ಬಡ್ಡಿ ಪಾವತಿಸಿದರೂ ಸಾಲಗಾರರ ಕಾಟ ತಪು$್ಪತ್ತಿಲ್ಲ ಎಂದು ಶಿಲ್ಪಾ ದೂರಿದ್ದಾರೆ. ಗರ್ಭೀಣಿ ಎಂಬ ಕಣಿಕರ ನೊಡದೇ ತೊಂದರೆ ಕೊಡುತ್ತಿರುವ ಸಾಲಗಾರರು ರಾತ್ರಿ 11 ಗಂಟೆವರೆಗೂ ಬಡ್ಡಿ ಕೊಡಿ ಎಂದು ಜುವ್ಯೆಲರಿ ಶಾಪ್​ ನಲ್ಲಿ ಕುಳಿತು ತಾಕೀತು ಮಾಡುತ್ತಿದ್ದಾರೆ. ಮನೆಗೆ ಆಳುಗಳನ್ನು ಕಳುಹಿಸಿ ಗರ್ಭೀಣಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಶಿಲ್ಪಾ ಆರೋಪಿಸಿದ್ದಾರೆ. ಈ ಪ್ರಕರಣದಿಂದ ಬಡ್ಡಿ, ಚಕ್ರ ಬಡ್ಡಿ ಸಾಲ ನೀಡುವರ ಬೇರು ಎಷ್ಟು ಆಳಕ್ಕೆ ಇಳಿದಿವೆ ಎಂಬುದು ಸ್ಪಷ್ಟವಾಗುತ್ತಿದೆ.

ಶಿಲ್ಪಾ ನೀಡಿದ ದೂರಿನ ಸಾರಾಂಶ:
ನರಗುಂದ ಪಟ್ಟಣದಲ್ಲಿ ಜುವ್ಯಲರಿ ಶಾಪ್​ ನಡೆಸುತ್ತಿರುವ ನಾವು ಕೆಲ ಜನರಿಂದ ಸಾಲ ಪಡೆದಿದ್ದೇವು. ಕಳೆದ ಎರಡು ವರ್ಷದಿಂದ ನೂರು ರೂಪಾಯಿಗೆ 10 ರಿಂದ 15 ರೂ. ಬಡ್ಡಿ ಪಾವತಿಸುತ್ತ ಬಂದಿದ್ದೇವೆ. ಸಾಲಕ್ಕಿಂತ ಬಡ್ಡಿಯನ್ನೇ ಅಧಿಕವಾಗಿ ಕಟ್ಟಿದ್ದೇವೆ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಸಾಲಗಾರರ ಕಾಟಕ್ಕೆ 20 ದಿನಗಳಿಂದ ನನ್ನ ಪತಿ ಮನೆ ಬಿಟ್ಟು ಹೋಗಿದ್ದಾರೆ. ಸಾಲಗಾರರು ಮನೆವರೆಗೂ ಬಂದು ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಅಂಗಡಿಯಲ್ಲಿ ಒಬ್ಬಳೆ ಇದ್ದಾಗಲೂ ರಾತ್ರಿ 10, 11 ಗಂಟೆವರೆಗೂ ಕುಳಿತು ಬಡ್ಡಿ ಕೊಡಿ ಎಂದು ಚಿತ್ರ ಹಿಂಸೆ ನೀಡುತ್ತಿದ್ದಾರೆ. 8 ತಿಂಗಳ ಗರ್ಭೀಣ ಆಗಿರುವ ನಾನು ಊಟಕ್ಕೆ ಹೋಗಬೇಕೆಂದರೂ, ಶೌಚಕ್ಕೆ ಹೋಗಬೇಕೆಂದರೂ ಬಿಡದಂತೆ ಕಾವಲು ಕಾಯುತ್ತಿದ್ದಾರೆ. ಅಂಗಡಿಯಲ್ಲಿದ್ದ ಕೆಲವೇ ಆಭರಣಗಳನ್ನು ತೆಗೆದುಕೊಂಡು ಹೋಗವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಇದರಿಂದ ತೊಂದರೆ ಅನುಭವಿಸುತ್ತಿದ್ದೇನೆ. ಹೊಟ್ಟೆಯಲ್ಲಿರುವ ಮಗುವಿಗಾಗಿ ಬದುಕಿದ್ದೇನೆ ವಿನಹ ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದೆನಿಸುತ್ತದೆ. ಈ ಮೊದಲು 2 ರೂ, 3 ರೂ, ಬಡ್ಡಿ ಎಂದು ಕೊಟ್ಟಿರುವ ಸಾಲಗಾರರು ಈಗ 10 ರೂ, 15 ರೂ. ಲೆಕ್ಕ ಮಾಡಿ ಬಡ್ಡಿ ಕೇಳುತ್ತಿದ್ದಾರೆ. ಸಾಲ ನೀಡಿದವರಲ್ಲಿ ಒಬ್ಬರು ಸ್ಥಳಿಯ ಪುರಸಭೆ ಸದಸ್ಯರು ಎನ್ನಲಾಗಿದೆ. ಮತ್ತೊಬ್ಬರು ಟ್ರೇಡಿಂಗ್​ ಕಂಪನಿ ಮಾಲೀಕರಾಗಿದ್ದಾರೆ. ಮತ್ತು ಕೆಲವರು ದಿನಕ್ಕೆ 300 ರೂ. ಬಡ್ಡಿಮ ಚಕ್ರ ಬಡ್ಡಿಹಾಕಿ ಪೀಡಿಸುತ್ತಿದ್ದಾರೆ ಎಂದು ಗರ್ಭೀಣಿ ಶಿಲ್ಪಾ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸ್​ ಇಲಾಖೆ ಕ್ರಮ:
ಗರ್ಭೀಣಿ ಎನ್ನದೇ ರಾತ್ರಿ ಅಂಗಡಿಗೆ ತೆರಳಿ ತೊಮದರೆ ಕೊಡುತ್ತಿರುವರನ್ನು ನಗರಗುಂದ ಠಾಣೆಗೆ ಕರೆಸಿದ್ದ ಸ್ಥಳಿಯ ಡಿವೈಎಸ್​ಪಿ ಅವರು ತೊಂದರೆ ನಿಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಪೊಲೀಸ್​ ಇಲಾಖೆಯ ಕಾರ್ಯ ಸಕಾರಾತ್ಮಕವಾಗಿದ್ದರೂ, ನರಗುಂದದಲ್ಲಿ ಈ ರೀತಿಯ ಮೀಟರ್​ ಬಡ್ಡಿ ನೀಡುವರ ವಿರುದ್ಧ ಕಾರ್ಯಾಚರಣೆ ಮಾಡುವ ಅಗತ್ಯತೆ ಇದೆ ಎಂಬುದನ್ನು ಪೊಲೀಸ್​ ಇಲಾಖೆ ಮನವರಿಕೆ ಮಾಡಿಕೊಳ್ಳಬೇಕಿದೆ.

ಕೋಟ್​:
ಪಡೆದ ಸಾಲಕ್ಕಿಂತ ಹೆಚ್ಚಾಗಿಯೇ ಬಡ್ಡಿ ಕೊಟ್ಟಿದ್ದೇವೆ. ದಿನಕ್ಕೆ 300 ರೂ. ನಂತೆ ಬಡ್ಡಿ, ಚಕ್ರ ಬಡ್ಡಿ ಕೇಳುತ್ತಿದ್ದಾರೆ. ಆರಂಭದಲ್ಲಿ 2 ರೂ. ನಂತೆ ಬಡ್ಡಿಗೆ ಸಾಲ ನೀಡಿ ಕೊನೆಯಲ್ಲಿ 10 ರೂ. 15 ರೂ. ಗೆ ಬಡ್ಡಿ ಲೆಕ್ಕ ಹಾಕಿ ತೊಂದರೆ ಕೊಡುತ್ತಿದ್ದಾರೆ. ಜುವ್ಯೆಲರಿಶಾಪ್​ನಲ್ಲಿ ಒಬ್ಬಳೇ ಇದ್ದರೂ ರಾತ್ರಿ ಬಂದು ಅಂಗಡಿಯಲ್ಲಿ ಕುಳಿತು ತೊಂದರೆ ನೀಡುತ್ತಿದ್ದಾರೆ.
ಶಿಲ್ಪಾ ವರ್ಣೆಕರ್​, ದೂರುದಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net