ಹವಾಮಾನ ಇಲಾಖೆ ಮುನ್ಸೂಚನೆ: ರಾಜ್ಯಕ್ಕೆ ಸಾಧಾರಣ ಮುಂಗಾರಿನ ಸ್ಪರ್ಶ | Weather report

untitled-design-2025-09-19t120941309-68ccfabf66a86
Published on

Weather report : ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಿನ್ನೆಯಿಂದ ಭಾರೀ ಮಳೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ. ನೈಋತ್ಯ ಮಾನ್ಸೂನ್​ ಸಕ್ರೀಯವಾಗಿರುವುದರಿಂದ ನಗರದಲ್ಲಿ ತಾಪಮಾನ ತೀವ್ರವಾಗಿ ಕುಸಿದಿದೆ. ಇನ್ನು ನಗರದಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಮುಂದಿನ 7 ದಿನಗಳ #ಮಳೆ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD)

ರಾಜ್ಯದಾದ್ಯಂತ ಇಂದು ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ ಚದುರದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ. ಇನ್ನುಳಿದ ದಿನಗಳಲ್ಲಿ ಮಳೆ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆಯಿದೆ. #KSNDMC @KarnatakaVarthe #ಎಚ್ಚರಿಕೆವಹಿಸಿ #ಮುಂಗಾರುಮಳೆ pic.twitter.com/O0EVCY1vNA

— Karnataka State Natural Disaster Monitoring Centre (@KarnatakaSNDMC) September 19, 2025 ನಗರದಲ್ಲಿ ಕನಿಷ್ಟ ಮತ್ತಯು ಗರಿಷ್ಟ ತಾಪಮಾನ 21 ಡಿಗ್ರಿ ಸೆಲ್ಸಿಯಸ್​ನಿಂದ 25 ಡಿಗ್ರಿ ಸೆಲ್ಸಿಯಸ್​ವರೆಗೆ ಇರಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಸಂಜೆಯ ನಂತರ ಸಾಧಾರಣ ಮಟ್ಟದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ನಗರವು ಸೌಮ್ಯವಾಗಿರುತ್ತದೆ ಎಂದು ಹವಮಾನ ಇಲಾಖೆ ತಿಳಿಸಿದೆ.

 X ನಲ್ಲಿ ವರದಿ ಹಂಚಿಕೊಂಡ KSNDMC

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) 7 ದಿನಗಳ ಹವಾಮಾನ ವರದಿಯನ್ನು X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದೆ. ಇಂದು (ಸೆಪ್ಟೆಂಬರ್​ 19) ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಳಿದ ದಿನಗಳಲ್ಲಿ ಸಾಧಾರಣ ಮಳೆಯಾಗುತ್ತದೆ ಎಂದು ಬರೆದುಕೊಂಡಿದೆ.

ಆದ್ರತೆಯ ಮಟ್ಟವು ಶೇ 91ರ ಆಸುಪಾಸಿನಲ್ಲಿ ಇರಬಹುದು. ವಿಸೇಷವಾಗಿ ಮಳೆಯ ನಂ.ತರ ಗಾಳಿಯು ತೇವವಾಗಿರುತ್ತದೆ. ಮಳೆಯಿಂದಾಗಿ ಸಂಚಾರದಲ್ಲಿ ಅಡಚಣೆ ಉಂಟಾಗಬಹುದು. ಇನ್ನು ನಿವಾಸಿಗಳು ಮನೆಯ ಒಳಗೆ ಇದ್ದು, ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಳ್ಳಬೇಕೆಂದು ಹವಮಾನ ಇಲಾಖೆ ಮನವಿ ಮಾಡಿದೆ.

ನೈಋತ್ಯ ಮಾನ್ಸೂನ್​ ಹಿನ್ನೆಲೆ

ನೈಋತ್ಯ ಮಾನ್ಸೂನ್ ಋತುಮಾನದ ಗಾಳಿಯ ಬದಲಾವಣೆಯಾಗಿದ್ದು, ಭಾರತದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಚಲಿಸುವ ಪ್ರಮುಖ ಮಳೆಗಾಲವಾಗಿದೆ. ಇದು ಅರೇಬಿಯನ್ ಸಮುದ್ರದಿಂದ ತೇವಾಂಶವನ್ನು ತಂದು ದೇಶಾದ್ಯಂತ ಮಳೆಯನ್ನು ಒದಗಿಸುತ್ತದೆ. ಕೃಷಿ, ಜಲಸಂಪನ್ಮೂಲ ಮತ್ತು ಆರ್ಥಿಕತೆಗೆ ನಿರ್ಣಾಯಕವಾಗಿದೆ. ಇದು ಕೇರಳದಿಂದ ಪ್ರಾರಂಭವಾಗಿ, ಭಾರತದ ವಿವಿಧ ಭಾಗಗಳಿಗೆ ವ್ಯಾಪಿಸುತ್ತದೆ, ಆದರೆ ಅನಿಯಮಿತ ಮಳೆಯು ಬರ ಅಥವಾ ಪ್ರವಾಹಕ್ಕೆ ಕಾರಣವಾಗಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net