ಶೇ. 5ರಷ್ಟು ಲಾಭಾಂಶ ಕೊಡುವುದಾಗಿ ನಂಬಿಸಿ 7.55 ಲಕ್ಷ ರೂ. ವಂಚನೆ

Cibra
Published on

ಹಾವೇರಿ: ಫೋನ್​ಗೆ ಮೆಸೆಂಜರ್​ ಮೂಲಕ ಲಿಂಕ್​ವೊಂದನ್ನು ಕಳುಹಿಸಿ ಇದರಲ್ಲಿ ಹೂಡಿಕೆ ಮಾಡಿದರೆ ಶೇ. 5ರಷ್ಟು ಲಾಭಾಂಶ ದೊರೆಯಲಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 7.55 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್​ ಕ್ರೆೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಗ್ಗಾಂವಿ ತಾಲೂಕಿನ ಸುಂಕದಕೇರಿ ನಿವಾಸಿ ಬಾಬುರಾವ್​ ಪ್ರಕಾಶ ಹಂಡೆ (26) ಎಂಬುವರಿಗೆ ಮೋಸ ಮಾಡಿರುವುದು.

ಇವರ ಫೋನ್​ಗೆ ಬಿಟೆನಎಕ್ಸಚೆಂಜ್​ ಎಂಬ ಲಿಂಕ್​ವೊಂದನ್ನು ಕಳುಹಿಸಿ, ಇದರಲ್ಲಿ ಹೂಡಿಕೆ ಮಾಡಿದರೆ ಶೆ. 5ರಷ್ಟು ಲಾಭಾಂಶ ಕೊಡುವುದಾಗಿ ನಂಬಿಸಿದ್ದಾರೆ. ಅದರಂತೆ ಬಾಬುರಾವ್​ 7.55 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆದರೆ, ಅವರಿಗೆ ಲಾಭಾಂಶ ಹಾಗೂ ಅಸಲು ಕೂಡ ನೀಡದೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net