ಉತ್ತರ ಕನ್ನಡ ಕ್ಯಾಥೋಲಿಕ್‌ ಧರ್ಮಪ್ರಾಂತ್ಯದ ನೂತನ ಬಿಷಪ್‌ ಆಗಿ ಮೆಸೆಂಜರ್ ಡುಮಿಂಗ್ ಡಯಾಸ್ ನೇಮಕ

Duming-Dayas.
Published on

ಕಾರವಾರ: ಉತ್ತರ ಕನ್ನಡ ಕ್ಯಾಥೋಲಿಕ್ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ (ಬಿಷಪ್) ಹೊನ್ನಾವರ ಮೂಲದ ಮೆಸೆಂಜರ್ ಡುಮಿಂಗ್ ಡಯಾಸ್ ಅವರು ನೇಮಕಗೊಂಡಿದ್ದಾರೆ.
ಈ ಹಿಂದೆ ಉತ್ತರ ಕನ್ನಡ ಬಿಷಪ್ ಆಗಿದ್ದ ಡೆರಿಕ್ ಫರ್ನಾಂಡಿಸ್ ಬೆಳಗಾವಿಗೆ ವರ್ಗವಾದ ನಂತರ ಸ್ಥಾನ ತೆರವಾಗಿತ್ತು. ಸುಮಾರು 5 ವರ್ಷಗಳಿಂದ ಡೆರಿಕ್ ಅವರೇ ಉತ್ತರ ಕನ್ನಡ ಪ್ರಭಾರಿಯಾಗಿದ್ದರು. ಶನಿವಾರ ರೋಮ್‌ನಲ್ಲಿ ಪೋಪ್ ಪ್ರಾನ್ಸಿಸ್ ಅವರು ಡುಮಿಂಗ್ ಡಯಾಸ್ ಅವರನ್ನು ನೇಮಕ ಮಾಡಿದ್ದಾರೆ.
1969 ರಲ್ಲಿ ಅಂಬ್ರೋಜ್ ಹಾಗೂ ಮರ್ಸೆಲಿನ್ ಡಯಾಸ್ ಅವರ ಪುತ್ರನಾಗಿ ಜನಿಸಿದ ಡುಮಿಂಗ್ ಡಯಾಸ್ ಅವರು, ಬೆಂಗಳೂರಿನಲ್ಲಿ ಬಿಎ, ಇಂಗ್ಲಿಷ್ ಎಂಎ, ಬಿಎಡ್, ಎಂಎಡ್, ಎಂಬಿಎ ಓದಿದ್ದಾರೆ.ಬೆಂಗಳೂರಿನಲ್ಲಿ ಕ್ಯಾಥೋಲಿಕ್ ತತ್ವಶಾಸ್ತçದಲ್ಲಿ ಪದವಿ, ನಂತರ ಮಂಗಳೂರು, ರೋಮ್ ವಿವಿಗಳಲ್ಲಿ ಉನ್ನತ ಅಧ್ಯಯನ ನಡೆಸಿ, ಶಿವಮೊಗ್ಗದ ಚರ್ಚ್ಗೆ 1997 ರಲ್ಲಿ ಫ್ರೀಸ್ಟ್ ಆಗಿ ನೇಮಕಗೊಂಡಿದ್ದರು ನಂತರ ಅವರು ಶಿವಮೊಗ್ಗದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಅವರ ಅವಽಯಲ್ಲಿ ಕಾರವಾರ ಕ್ಯಾಥೋಲಿಕ್ ಧರ್ಮಪ್ರಾಂತ್ಯ ನೌನ್ನತ್ಯಕ್ಕೆ ಏರಲಿದೆ ಎಂಬ ವಿಶ್ವಾಸವಿದೆ ಎಂದು ಉತ್ತರ ಕನ್ನಡ ಪ್ರಭಾರ ಬಿಷಪ್ ಡೆರಿಕ್ ಫರ್ನಾಂಡಿಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net