ಶರಣರ ಸಂದೇಶಗಳು ಜೀವನಕ್ಕೆ ದಾರಿದೀಪ

30 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮೃತ್ಯುಂಜಯಪ್ಪಗಳ ಹಾಗೂ ಶಿವಯೋಗಿ ಅಪ್ಪಗಳ ವಾಣಿ ಹಾಗೂ ಶರಣರು, ಸಂತರು, ದಾರ್ಶನಿಕರ, ಮಹಾತ್ಮರು ಕೊಟ್ಟ ಮಹತ್ವದ ಸಂದೇಶಗಳು ನಮಗೆ ದಾರಿದೀಪವಾಗಿ ಜೀವನಕ್ಕೆ ಸಹಕಾರಿಯಾಗುತ್ತವೆ ಎಂದು ಮೂರಸಾವಿಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಮುರುಘಾಮಠದಲ್ಲಿ ಶ್ರೀ ಮದಥಣಿ ಮುರುಘೇಂದ್ರ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪ್ಪಗಳು ಸಮಾಜಕ್ಕೆ ಅನುಕೂಲಕರವಾಗುವ ವೈಚಾರಿಕ ಸಿದ್ಧಾಂತಕ್ಕೆ ಬದ್ದರಾದರು. ಶಿವಾನುಭವ ಮಂಟಪದಲ್ಲಿ ನಿತ್ಯ ವೈಚಾರಿಕ ಚಿಂತನೆಗಳು ನಡೆದವು. ಇಲ್ಲಿ ನಡೆದ ಚಿಂತನೆ, ಅನುಭಾವಗಳ ನುಡಿಗಳು ಸಮಾಜಕ್ಕೆ ಅತ್ಯುತ್ತಮ ಸಂದೇಶಗಳಾಗಿ ರೂಪುಗೊಂಡವು. ಮಕ್ಕಳಿಗಾಗಿ ಶಿಕ್ಷಣ, ವಸತಿ, ಪ್ರಸಾದಕ್ಕಾಗಿ ಜೀವನ ಸವೆಸಿದರೆ, ಹೊರತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ. ಜಾತಿ, ಮತ, ಪಂಥಕ್ಕೆ ಮಹತ್ವ ನೀಡದೆ ಎಲ್ಲ ಬಾಂಧವರ ಜತೆಗೆ ಸಮವಾಗಿ ಬಾಳಿ ಬದುಕಿದರು ಎಂದರು.

ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ಇತರರು ಇದ್ದರು. ಎಂ.ಎಸ್​. ಗಾಣಗೇರ ಸ್ವಾಗತಿಸಿದರು. ಡಾ ವೀರಣ್ಣ ರಾಜೂರ ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net