ಮಳೆಗಾಲದ ಸಂಭಾವ್ಯ ಸವಾಲುಗಳನ್ನು ಎದುರಿಸಲು ಮೆಸ್ಕಾಂ ಸಿದ್ಧ

ಮೆಸ್ಕಾಂ
ಮೆಸ್ಕಾಂ
Published on
ಮಂಗಳೂರು: ವಿದ್ಯುತ್‌ಗೆ ಸಂಬಂಧಿಸಿದಂತೆ ಮಳೆಗಾಲದ ಸಂಭಾವ್ಯ ಸವಾಲುಗಳನ್ನು ಎದುರಿಸಲು ಮೆಸ್ಕಾಂ ಸನ್ನದ್ದವಾಗಿದ್ದು ವಿಭಾಗವಾರು ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಮೆಸ್ಕಾಂ ವ್ಯಾಪ್ತಿಯ 4 ಜಿಲ್ಲೆಗಳ 14 ವಿಭಾಗಗಳಿಗೆ ಒಟ್ಟು 489 ಮ0ದಿಯ ಕಾಯ9ಪಡೆಯನ್ನು ರಚಿಸಲಾಗಿದೆ. ಒಟ್ಟು 62 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ. ಇದಲ್ಲದೆ ದೂರವಾಣಿಕರೆಗಳ ನಿರ್ವಹಣೆಗಾಗಿ 23
ಮಂದಿಯ ವಿಶೇಷ ಪಡೆಯನ್ನು ಸಿದ್ದಗೊಳಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ ಸ್ಪಂದಿಸಲು ಮಂಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಅತ್ತಾವರ-12 ಮಂದಿಯ ಕಾರ್ಯಪಡೆ, 6 ವಾಹನಗಳು, ಕಾವೂರು-36 ಮಂದಿ,8 ವಾಹನಗಳು. ಪುತ್ತೂರು- 48 ಮಂದಿಯ ಕಾರ್ಯಪಡೆ, 8 ವಾಹನಗಳು. ಬಂಟ್ವಾಳ - 50 ಮಂದಿಯ ಕಾರ್ಯಪಡೆ, 7 ವಾಹನಗಳು.
ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ, ಉಡುಪಿ-55 ಮಂದಿಯ ಕಾರ್ಯಪಡೆ, 5 ವಾಹನಗಳು,ಕಾರ್ಕಳ- 24 ಮಂದಿಯ ಕಾರ್ಯಪಡೆ,4 ವಾಹನಗಳು, ಕುಂದಾಪುರ - 48 ಮಂದಿಯ ಕಾರ್ಪಡೆ. ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ, ಶಿವಮೊಗ್ಗ-33 ಮಂದಿಯ ಕಾರ್ಯಪಡೆ, 1 ವಾಹನ,ಶಿಕಾರಿಪುರ- 24 ಮಂದಿಯ ಕಾರ್ಯಪಡೆ, 3 ವಾಹನಗಳು, ಭದ್ರಾವತಿ-20 ಮಂದಿಯ ಕಾರ್ಯಪಡೆ,2ವಾಹನಗಳು, ಸಾಗರ- 34 ಮಂದಿಯ ಕಾರ್ಯಪಡೆ, 6 ವಾಹನಗಳು.
ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ, ಚಿಕ್ಕಮಗಳೂರು-40 ಮಂದಿಯ ಕಾರ್ಯಪಡೆ,4 ವಾಹನಗಳು,ಕೊಪ್ಪ-41 ಮಂದಿಯ ಕಾರ್ಯಪಡೆ, 3 ವಾಹನಗಳು, ಕಡೂರು 34 ಮಂದಿಯ ಕಾರ್ಯಪಡೆ, ಹಾಗೂ 7ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ವಿದ್ಯುತ್ ಸರಬರಾಜು ವ್ಯವಸ್ಥೆಗೆ ಅಡಚಣೆಯಾಗುವ ಮತ್ತು ಅಪಾಯಕಾರಿಯಾಗಿರುವ ಮರ/ಕೊಂಬೆಗಳನ್ನುಕತ್ತರಿಸುವ ಕೆಲಸ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಿದ್ದು, ಹಲವು ಕಡೆ ಕೆಲಸ ಪ್ರಗತಿಯಲ್ಲಿದೆ. ಅಪಾಯಕಾರಿಸ್ಥಿತಿಯಲ್ಲಿ ಕಂಡುಬರುವ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ.
ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವ ಸಿದ್ಧತಾ ಚಟುವಟಿಕೆಗಳು ಈಗಾಗಲೇ ಪ್ರಾರಂಭಗೊಂಡಿವೆ. ಕಂಪೆನಿ ವ್ಯಾಪ್ತಿಯ ಎಲ್ಲಾ ಕ್ಷೇತ್ರಾಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಅವರುಗಳು ಕಾರ್ಯಪ್ರವೃತ್ತರಾಗಿದ್ದಾರೆ. ಗ್ರಾಹಕರು ವಿದ್ಯುತ್ ಸಂಬಂಧಿತ ದೂರುಗಳಿಗೆ 24 *7 ಕೇಂದ್ರೀಯ ಸೇವಾ ಕೇಂದ್ರವನ್ನು ಮೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಮೂಲಕ ಸಂಪರ್ಕಿಸಬಹುದು.
ಜಯ ಕುಮಾರ್ ಆರ್.
ವ್ಯವಸ್ಥಾಪಕ ನಿರ್ದೇಶಕರು
ಮೆಸ್ಕಾಂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net