ಮೆಸ್ಕಾಂ ಖಾಸಗೀಕರಣದಿಂದ ಸರ್ಕಾರದ ಹತೋಟಿ ತಪ್ಪಲಿದೆ MESCOM

ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್‌ ಅವರಿಗೆ ಮೆಸ್ಕಾಂ ಖಾಸಗೀಕರಣ ವಿರೋ˜ಸಿ ಮನವಿ ಸಲ್ಲಿಸಲಾಯಿತು. ಶ್ರೀಧರ ಶೆಟ್ಟಿ, ಮನೋಹರ ಶೆಟ್ಟಿ, ಹೊನ್ನಪ್ಪ ಗೌಡ, ಮುರುವ ಮಹಾಬಲ ಭಟ್‌ ಮೊದಲಾದವರಿದ್ದರು.
ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್‌ ಅವರಿಗೆ ಮೆಸ್ಕಾಂ ಖಾಸಗೀಕರಣ ವಿರೋ˜ಸಿ ಮನವಿ ಸಲ್ಲಿಸಲಾಯಿತು. ಶ್ರೀಧರ ಶೆಟ್ಟಿ, ಮನೋಹರ ಶೆಟ್ಟಿ, ಹೊನ್ನಪ್ಪ ಗೌಡ, ಮುರುವ ಮಹಾಬಲ ಭಟ್‌ ಮೊದಲಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಧರ ಶೆಟ್ಟಿ ಆತಂಕ
  • ರೈತ ಸಂಘದಿಂದ ಮುಖ್ಯಮಂತ್ರಿಗೆ ಮನವಿ
ಪುತ್ತೂರು: ಮೆಸ್ಕಾಂ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಪುತ್ತೂರು ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ವಿದ್ಯುತ್‌ ಖಾಸಗೀಕರಣದಿಂದ ಕೃಷಿಕರ ಸವಲತ್ತುಗಳಿಗೆ ಅಡಚಣೆಯಾಗುವ ಸಾಧ್ಯತೆಯಿದೆ. ಸರ್ಕಾರ ಖಾಸಗಿ ಕಂಪನಿಯ ಮೇಲೆ ಹತೋಟಿ ಕಳೆದುಕೊಳ್ಳುತ್ತದೆ. ವಿದ್ಯುತ್‌ ದರ ದುಬಾರಿಯಾಗುವ ಆತಂಕ ಎದುರಾಗಿದೆ. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದರು.
ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್‌ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಮಾರ್ಗದರ್ಶಕ ಮುರುವ ಮಹಾಬಲ ಭಟ್‌, ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ, ಪ್ರಮುಖರಾದ ಶಿವಣ್ಣ ಗೌಡ, ರಾಜೇಂದ್ರ ಇಡ್ಯಾಡಿ, ಹರ್ಷ ಕುಮಾರ್‌ ಹೆಗ್ಡೆ, ರಾಮಣ್ಣ ಪಾಳಿಗೆ, ರಾಜೀವ ಗೌಡ, ಹರಿಣಾಕ್ಷಿ, ಗೀತಾ, ನಾರಾಯಣ ಗೌಡ, ಶಿವಚಂದ್ರ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net