ಮಂಗಳೂರು: ಮೆಸ್ಕಾಂ 33/11 ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ಮುತ್ತಪ್ಪ ಟೆಂಪಲ್ ಫೀಡರ್ನಲ್ಲಿ ಮಾದರಿ ಉಪವಿಭಾಗದ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮಾ.19ರ ಬೆಳಗ್ಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಅತ್ತಾವರ, ವೆನ್ಲಾಕ್ ಆಸ್ಪತ್ರೆ, ಮಿಲಾಗ್ರಿಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 110/33/11 ಕೆವಿ ಬಿಜೈ ಉಪಕೇಂದ್ರದಿಂದ ಹೊರಡುವ 11ಕೆವಿ ಬಿಜೈ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಬಿಜೈ ನ್ಯೂ ರೋಡ್, ಸಂಕೈಗುಡ್ಡ, ಎಂ.ಸಿ.ಎಫ್ ಕಾಲೊನಿ, ಆನೆಗುಂಡಿ, ಬಿಜೈ ಚರ್ಚ್, ಬಿಜೈ ಮ್ಯೂಸಿಯಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 33/11ಕೆವಿ ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ 11ಕೆವಿ ಸೋಮೇಶ್ವರ ಫೀಡರ್ನಲ್ಲಿ ವ್ಯವಸ್ಥೆ ಸುಧಾರಣೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಪಿಲಾರ್ ಶಾಲೆ, ಅಂಬಿಕಾರೋಡ್, ಸರಸ್ವತಿ ಕಾಲನಿ, ದ್ವಾರಕಾನಗರ, ಅಬ್ಬಂಜರ, ಅನಿಲ್ ಕಂಪೌಂಡ್, 9ಕೆರೆ, ಕೆಹೆಚ್ಬಿ ಕಾಲನಿ, ಮೂಡಾ, ಸೋಮನಾಥ ಲೇಔಟ್, ಶಿವಶಕ್ತಿನಗರ, ಸೋಮೇಶ್ವರ ಟೆಂಪಲ್, ಸುಲ್ತಾನ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.