ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ನಿರ್ಲಕ್ಷೃ

5jyp2
ಗುಡ್ಡೇತೋಟ ಗ್ರಾಪಂ ವ್ಯಾಪ್ತಿಯ ಕೊಳೆಗೋಡು ಹಾಗೂ ಹಿರೇಹಳ್ಳಿ ವಿದ್ಯುತ್ ಮಾರ್ಗದ ಕಂಬ ಮುರಿದು ಬಿದ್ದಿರುವುದು.
Published on

ಜಯಪುರ: ಗುಡ್ಡೇತೋಟ ಗ್ರಾಪಂ ವ್ಯಾಪ್ತಿಯ ಕೊಳೆಗೋಡು ಹಾಗೂ ಹಿರೇಹಳ್ಳಿ ಗ್ರಾಮಗಳ 10ಕ್ಕೂ ಹೆಚ್ಚು ಮನೆಗಳಿಗೆ ಕಳೆದ ಒಂದು ತಿಂಗಳಿಂದ ವಿದ್ಯುತ್ ಸಂಪರ್ಕ ಇಲ್ಲವಾಗಿದೆ. ಮಳೆ, ಗಾಳಿಯಿಂದ ಬಿದ್ದ ಕಂಬ ಬದಲಾಯಿಸದೆ ಜಯಪುರದ ಮೆಸ್ಕಾಂ ಎಇ ನಿರ್ಲಕ್ಷೃವಹಿಸಿದ್ದಾರೆ ಎಂದು ಗ್ರಾಮಸ್ಥ ದಾಮೋದರ್ ಹೇಳಿಕೆಯಲ್ಲಿ ದೂರಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಸುರಿದ ಮಳೆಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಪಿಸುವ ಒಂದು ವಿದ್ಯುತ್ ಕಂಬ ಮುರಿದು ಬಿದ್ದು, ಗ್ರಾಮದ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಕಂಬ ಬದಲಾಯಿಸುವಂತೆ ಸ್ಥಳೀಯ ಲೈನ್‌ಮನ್, ಜಯಪುರ ಮೆಸ್ಕಾ ಎಇ ಹಾಗೂ ಕೊಪ್ಪ ಮೆಸ್ಕಾಂ ಎಇಇಗೆ ಅನೇಕ ಬಾರಿ ಮನವಿ ಮಾಡಿದರೂ ವಿದ್ಯುತ್ ಸಂಪರ್ಕ ಸರಿಪಡಿಸಿಲ್ಲ. ಸುಳ್ಳು ಭರವಸೆ ನೀಡಿ ದಿನ ಕಳೆಯುತ್ತಿದ್ದಾರೆ. ವಿದ್ಯುತ್ ಇಲ್ಲದೆ ಕುಡಿಯುವ ನೀರು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಇಲಾಖೆ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net