

ಸೊರಬ: ಅಸಮರ್ಪಕ ವಿದ್ಯುತ್ ಸರಬರಾಜು ವಿರೋಽಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದ ಮೆಸ್ಕಾಂ ಉಪವಿಭಾಗೀಯ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಹಾಲೇಶ್ ಗೌಡ ಮಾತನಾಡಿ, ತಾಲೂಕಿನಲ್ಲಿ ಕಳೆದ ಒಂದು ತಿಂಗಳಿAದ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಜೋಳ ಹಾಗೂ ಭತ್ತದ ಬೆಳೆ ಸಂಪೂರ್ಣ ಹಾಳಾಗಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ, ನಿರಂತರ ಮೂರ್ನಾಲ್ಕು ದಿನ ವಿದ್ಯುತ್ ಪೂರೈಸದೆ ಮೆಸ್ಕಾಂ ಇಲಾಖೆ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಬಿತ್ತನೆ ಮಾಡಿದ ಲಕ್ಷಾಂತರ ರೂ., ಮೌಲ್ಯದ ಬೆಳೆಗಳು ಹಾಳಾಗುತ್ತಿವೆ. ಈ ನಿಟ್ಟಿನಲ್ಲಿ ಹಗಲಿನ ವೇಳೆಯಲ್ಲಿ ತ್ರೀ ಫೇಸ್ ವಿದ್ಯುತ್ ಏಳು ತಾಸು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ನಿರಂತರ ಮೂರು ದಿನಗಳ ಕಾಲ ಒಂದು ಗಂಟೆಯೂ ಸಹ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡದೆ ಮೆಸ್ಕಾಂ ಅಽಕಾರಿಗಳು ನಿರ್ಲಕ್ಷ್ಯ ತೋರಿದರು. ಉಳವಿ, ಮಾವಲಿ, ಆನವಟ್ಟಿ, ಕಸಬಾ ಸೇರಿ ಉದ್ರಿ ಭಾಗಕ್ಕೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿಲ್ಲ. ರೈತರು ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಕೆಯಾಗಬಹುದು ಎಂಬ ಕನಸಿನೊಂದಿಗೆ ಹೊಲ-ಗದ್ದೆಗಳಲ್ಲೇ ಮಲಗುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಇಲಾಖಾಽಕಾರಿಗಳು ರೈತರಿಗೆ ಸ್ಪಂದಿಸುವ ಕನಿಷ್ಟ ಸೌಜನ್ಯವನ್ನೂ ತೋರುತ್ತಿಲ್ಲ. ಜತೆಗೆ ಟಿಸಿ ಹಾಳಾದರೆ ಬದಲಿ ಮಾಡಿಸಿಕೊಳ್ಳಲೂ ವಾರಗಟ್ಟಲೆ ಕಾಯಬೇಕಾಗಿದೆ. ರೈತರ ಸಮಸ್ಯೆಗಳಿಗೆ ಅಽಕಾರಿಗಳು ಸ್ಪಂದಿಸಬೇಕು. ಇಲ್ಲವಾದಲ್ಲಿ ತ್ವರಿತವಾಗಿ ನಿರಂತರ ಹೋರಾಟ ಮಾಡಲಾಗುವುದು. ಸ್ಥಳಕ್ಕೆ ಮೆಸ್ಕಾಂ ಸಾಗರ ಇಇ ಆಗಮಿಸುವಂತೆ ರೈತರು ಪಟ್ಟು ಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಾಗರ ವಿಭಾಗದ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ಮಾತನಾಡಿ, ವಿದ್ಯುತ್ ಉತ್ಪಾದನೆಯಲ್ಲಿ ಮತ್ತು ವಿದ್ಯುತ್ ಸರಬರಾಜಿನಲ್ಲಿ ತೊಡಕಾಗಿದ್ದರಿಂದ ಈ ಹಿಂದೆ ಮೂರು ದಿನ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಸಾಧ್ಯವಾಗಲಿಲ್ಲ. ಇದೀಗ ಹಗಲು ಮತ್ತು ರಾತ್ರಿ ಸೇರಿ ತಲಾ ಮೂರು ತಾಸು ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮೇಲಽಕಾರಿಗಳ ಗಮನಕ್ಕೆ ತಂದು ಹಗಲು ವೇಳೆ ನಾಲ್ಕು ಮತ್ತು ರಾತ್ರಿ ವೇಳೆ ಮೂರು ತಾಸು ತ್ರೀ ಫೇಸ್ ವಿದ್ಯುತ್ ಪೂರೈಸಲಾಗುವುದು. ಉತ್ತಮ ಮಳೆಯಾಗಿ ವಿದ್ಯುತ್ ಉತ್ಪಾದನೆಯಾದರೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪೂರೈಸಲಾಗುವುದು ಎಂದರು.
ಮೆಸ್ಕಾಂ ಸೊರಬ ವಿಭಾಗದ ಎಇಇ ಸತ್ಯ ಪ್ರಕಾಶ್, ಶಾಖಾಽಕಾರಿಗಳಾದ ಸುರೇಶ್, ಉಮೇಶ್, ಪ್ರವೀಣ್ ರೈತರ ದೂರುಗಳಿಗೆ ಉತ್ತರಿಸಿದರು. ಅಽಕಾರಿಗಳ ಭರವಸೆಗೆ ಮಣಿದ ರೈತರು ಪ್ರತಿಭಟನೆಯನ್ನು ಹಿಂಪಡೆದರು. ಪ್ರತಿಭಟನೆಯ ತೀವ್ರ ಸ್ವರೂಪ ಅರಿತು ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಚ್.ವೇದಮೂರ್ತಿ, ಕಾಯದರ್ಶಿ ಶಿವಪ್ಪ, ಉಪಾಧ್ಯಕ್ಷ ಶಿವರಾಜ್, ವಿಜಯಕುಮಾರ್, ಬಸವಣ್ಯಪ್ಪ, ಶಫೀ, ಕೆರಿಯಪ್ಪ ಕೊಡಕಣಿ ಸೇರಿ ಹಲವು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.