ನಿರಂತರ ವಿದ್ಯುತ್ ಕಡಿತಕ್ಕೆ ಗ್ರಾಹಕರ ಅಸಮಾಧಾನ : ಲೈನ್‌ನ್ ಹುದ್ದೆ ಭರ್ತಿ, ಟ್ರೀ ಕಟ್ಟಿಂಗ್‌ಗೆ ಒತ್ತಾಯ

04
Published on

ವಿಜಯವಾಣಿ ಸುದ್ದಿಜಾಲ ಸುಳ್ಯ

ಸುಳ್ಯ ಉಪವಿಭಾಗ ಕಚೇರಿಯಲ್ಲಿ ಮಂಗಳವಾರ ನಡೆದ ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪ ವಿಭಾಗಮಟ್ಟದ ಜನಸಂಪರ್ಕ ಸಭೆಯಲ್ಲಿ ಸುಳ್ಯದಲ್ಲಿ ಉಂಟಾಗುತ್ತಿರುವ ನಿರಂತರ ವಿದ್ಯುತ್ ಕಡಿತಕ್ಕೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದರು.

110 ಕೆ.ವಿ. ಲೈನ್ ಹಾಗೂ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿ ವಿಳಂಬ ಯಾಕೆ? ಸಬ್ ಸ್ಟೇಷನ್ ಕಾಮಗಾರಿ ಯಾವಾಗ ಪೂರ್ತಿಯಾಗುತ್ತದೆ ಎಂದು ಗ್ರಾಹಕರು ಪ್ರಶ್ನಿಸಿದರು. ತಾಲೂಕಿನಲ್ಲಿ ವಿದ್ಯುತ್ ಕಡಿತವಾದರೆ ಕೂಡಲೇ ಸರಿಪಡಿಸಲಾಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಯಿತು. ಲೈನ್‌ಮನ್ ಕೊರತೆಯಿಂದ ದುರಸ್ತಿ ಕಾರ್ಯ ಹಾಗೂ ನಿರ್ವಹಣೆ ವಿಳಂಬವಾಗುತ್ತಿದೆ ಎಂಬ ಉತ್ತರ ಕೇಳಿಬಂದಾಗ, ಲೈನ್‌ಮನ್ ನೇಮಕ ಮತ್ತು ಮರದ ಗೆಲ್ಲು ಕಡಿಯಲು ಕ್ರಮ ಕೈಗೊಳ್ಳಲು ಗ್ರಾಹಕರು ಒತ್ತಾಯಿಸಿದರು.

ಮಂಗಳೂರು ವೃತ್ತ ಕಚೇರಿ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅಧ್ಯಕ್ಷತೆ ವಹಿಸಿದ್ದರು. ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ಪ್ರಮುಖರಾದ ಜಿ.ಕೆ.ಹಮೀದ್ ಗೂನಡ್ಕ, ಪಿ.ಎಸ್.ಗಂಗಾಧರ, ಸುರೇಶ್ ಅಮೈ, ರಿಯಾಝ್ ಕಟ್ಟೆಕ್ಕಾರ್ಸ್, ನಂದರಾಜ ಸಂಕೇಶ್, ರಹೀಮ್ ಬೀಜದಕಟ್ಟೆ, ಬಾಲಗೋಪಾಲ ಸೇರ್ಕಜೆ, ಧೀರಾ ಕ್ರಾಸ್ತಾ, ಬಾಲಕೃಷ್ಣ ಭಟ್ ಕೊಡೆಂಕೇರಿ, ಮಹೇಶ್ ಬೆಳ್ಳಾರ್ಕರ್, ನಝೀರ್ ಶಾಂತಿನಗರ, ಸತ್ಯಕುಮಾರ್ ಆಡಿಂಜ, ರಾಧಾಕೃಷ್ಣ ಪರಿವಾರಕಾನ, ರಾಬಿಯಾ, ಹರೀಶ್ ಉಬರಡ್ಕ, ಎಸ್.ಕೆ.ಹನೀಫ್, ಲತೀಫ್ ಅಡ್ಕಾರ್, ಜುನೈದ್ ಅಡ್ಕಾರ್, ದಿನೇಶ್ ಸರಸ್ವತಿಮಹಲ್, ಯೂಸೂಫ್ ಅಂಜಿಕ್ಕಾರ್, ಅಬೂಬಕ್ಕರ್ ಅರಫ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಲಕ್ಷ್ಮೀ, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್, ಸುಳ್ಯ ಸಹಾಯಕ ಇಂಜಿನಿಯರ್ ಸುಪ್ರೀತ್, ಮೆಸ್ಕಾಂ ಸಹಾಯಕ ಇಂಜಿನಿಯರ್‌ಗಳಾದ ಹರಿಕೃಷ್ಣ, ಚಿದಾನಂದ, ಕಿರಿಯ ಇಂಜಿನಿಯರ್‌ಗಳಾದ ಪ್ರಸಾದ್ ಕತ್ಲಡ್ಕ, ಲೋಕೇಶ್ ಎಣ್ಣೆಮಜಲು, ಬಾಲಕೃಷ್ಣ ಪಂಜ, ಅಭಿಷೇಕ್, ಮಹೇಶ್ ಮತ್ತಿತರರಿದ್ದರು.

ಕೆಪಿಟಿಸಿಎಲ್ ನೇತೃತ್ವದಲ್ಲಿ 110 ಕೆವಿ ಸಬ್‌ಸ್ಟೇಷನ್ ಹಾಗೂ ಲೈನ್ ಕಾಮಗಾರಿ ನಡೆಯುತ್ತಿದೆ. 110 ಕೆ.ವಿ. ಲೈನ್ ಪೂರ್ತಿಯಾಗುವ ತನಕ ವಿದ್ಯುತ್ ಸಮಸ್ಯೆ ಉಂಟಾಗಬಾರದು. ನಿರಂತರ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ 33 ಕೆವಿ ಲೈನ್‌ಗೆ ಪರ್ಯಾಯವಾಗಿ ಬೆಳ್ಳಾರೆಯಿಂದ ಸುಳ್ಯಕ್ಕೆ ಭೂಗರ್ಭ ಕೇಬಲ್ ಮೂಲಕ 33 ಕೆವಿ ಲೈನ್ ನಿರ್ಮಾಣ ಮಾಡಲಾಗುವುದು. ಕಾವು ಸುಳ್ಯ ಏಕ ಪಥ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ಜಂಕ್ಷನ್‌ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸಲಾಗಿದೆ. ನಿರಂತರ ವಿದ್ಯುತ್ ಪೂರೈಕೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೃಷ್ಣರಾಜ್ ಮಂಗಳೂರು ವೃತ್ತ ಕಚೇರಿ ಅಧೀಕ್ಷಕ ಇಂಜಿನಿಯರ್ https://www.vijayavani.net/bhramari-mahila-mandal-anniversary https://www.vijayavani.net/sasihitlu-utthana-balaga-vidya-samriddhi-nidhi-lokarpane

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net