ಪ್ರತಿಭಟನೆ ಎಚ್ಚರಿಕೆ: ಬೈರಿಕಟ್ಟೆ ಕಾಡಮನೆ ಭಾಗದಲ್ಲಿ ವಿದ್ಯುತ್ ಪರಿವರ್ತಕವಿಲ್ಲದೆ, ಮಳೆಗಾಲದಲ್ಲೂ ತ್ರಿ ಫೇಸ್ ಪಂಪ್ ಚಾಲನೆಯಾಗುತ್ತಿಲ್ಲ. ಇಲ್ಲಿ ಐವತ್ತು ಮನೆಗಳಿದ್ದು ಇದ್ದು, ನಾಲ್ಕು ವರ್ಷದಿಂದ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಸಿಂಗಲ್ ಫೇಸ್ ಪಂಪ್ ಕೂಡಾ ಚಾಲನೆಯಾಗದ ಸ್ಥಿತಿಯಿದ್ದು, ಶೀಘ್ರ ಪರಿಹರಿಸದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾಗರಿಕರು ಎಚ್ಚರಿಸಿದರು.