ಬೈಕ್ ನಲ್ಲಿ ತೆರಳುತ್ತಿದ್ದ ಮೆಸ್ಕಾಂ ಲೈನ್ ಮ್ಯಾನ್ ಹೃದಯಾಘಾತದಿಂದ ಸಾವು

IMG-20201106-WA0033_2
Published on

ಶಿವಮೊಗ್ಗ: ಹೊಸನಗರ ತಾಲೂಕಿನ ನಗರ ಮೆಸ್ಕಾಂ ಕಚೇರಿ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಮೆಸ್ಕಾಂ ಲೈನ್ ಮ್ಯಾನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕುಂದಾಪುರ ತಾಲೂಕಿನ ಬಸ್ರೂರು ನಿವಾಸಿ ಜಾನ್ ಡಿಸೋಜ (೫೯) ಮೃತ ಲೈನ್ ಮ್ಯಾನ್.
 ನಗರ ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ‌ ಅವರು ಚಿಕ್ಕಪೇಟೆಯಲ್ಲಿ ರೂಂ ಮಾಡಿಕೊಂಡಿದ್ದರು. ಎದೆ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅಲ್ಲಿಂದ ಬೈಕ್ ನಲ್ಲಿ ನಗರ ಆಸ್ಪತ್ರೆಗೆ ತೆರಳುತ್ತಿದ್ದು ಮೆಸ್ಕಾಂ ಕಚೇರಿ ಸರ್ಕಲ್ ಬರುತ್ತಿದ್ದಂತೆ ಎದೆ ನೋವು ಜೋರಾಗಿ ಕುಸಿದು ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹೊಸನಗರ ಮೆಸ್ಕಾಂ ಎಈ ಚಂದ್ರಶೇಖರ್, ನಗರ ಮೆಸ್ಕಾಂ ಎಇಇ ನಾಗರಾಜ್ ಮತ್ತು ಮೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಕಂಬನಿ ಮಿಡಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net