

ಬೀರೂರು: ಮೆಸ್ಕಾಂ ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಬುಧವಾರ ಅದ್ದೂರಿಯಾಗಿ ಮೆರವಣಿಗೆ ನಡೆಸಿ ಬಾಕಿನ ಕೆರೆಯಲ್ಲಿ ವಿಸರ್ಜಿಸಲಾಯಿತು.
ಗಣೇಶನನ್ನು ಮೂರು ದಿನಗಳಿಂದ ಪೂಜಿಸಲಾಗುತ್ತಿತ್ತು. ಬುಧವಾರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಹೂವಿನ ಅಲಂಕಾರದಲ್ಲಿ ನಿರ್ಮಿಸಿದ್ದ ಮಂಟಪವನ್ನು ಟ್ರಾೃಕ್ಟರ್‌ನಲ್ಲಿರಿಸಿ ಗಣಪತಿಯನ್ನು ಪ್ರತಿಷ್ಠಾಪಿ ಮೆರವಣಿಗೆ ನಡೆಸಲಾಯಿತು. ಎಇ ರಮೇಶ್, ಎಎಒ ಪ್ರಭಾಕರ್, ಸಿಬ್ಬಂದಿ ಸತ್ಯನಾರಾಯಣ್, ತಿಮ್ಮರಾಯಪ್ಪ, ಕೃಷ್ಣಮೂರ್ತಿ, ವಸಂತ್, ಮುತ್ತು, ಸುಧಾಕರ್, ವೆಂಕಟ್ ರಾವ್, ರಾಮಚಂದ್ರಣ್ಣ, ಸಿದ್ದೇಶ್, ಬಸವರಾಜ್ ಇತರರಿದ್ದರು.