

ಶಿವಮೊಗ್ಗ: ವೆಂಕಟೇಶನಗರದ ಮನೆಯೊಂದರ ವಿದ್ಯುತ್ ಮೀಟರ್ ರೀಡಿಂಗ್‌ಗೆ ತೆರಳಿದ್ದ ಮೆಸ್ಕಾಂ ನೌಕರನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಲಾಗಿದೆ.
ಮೆಸ್ಕಾಂನ ಮೀಟರ್ ರೀಡಿಂಗ್ ಕೆಲಸ ಮಾಡುತ್ತಿರುವ ಎಚ್.ಟಿ.ಅಶ್ವಥ್ ಮೇಲೆ ಹಲ್ಲೆ ಮತ್ತು ಜೀವ ಬೆದರಿಕೆಗೆ ಒಳಗಾದ ನೌಕರ. ವೆಂಕಟೇಶನಗರದಲ್ಲಿ ಮನೆಯೊಂದರ ಗೇಟ್ ತೆಗೆದು ಒಳಗೆ ಹೋಗಿ ಅಶ್ವಥ್ ಮೀಟರ್ ರೀಡಿಂಗ್ ಮಾಡುತ್ತಿದ್ದರು. ಈ ವೇಳೆ ಮನೆಯೊಳಗಿನಿಂದ ಬಂದ ವ್ಯಕ್ತಿಯೊಬ್ಬ ಅನುಮತಿ ಇಲ್ಲದೆ ಒಳಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಶ್ವಥ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ವ್ಯಕ್ತಿ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.