ಎಂಇಎಸ್ ಕಿಡ್ಡೋಸ್ ಶಾಲೆಗೆ ಚಾಲನೆ

71d58ea3-2fdd-47af-a441-ba298cee157d
ಚಿಕ್ಕಮಗಳೂರಲ್ಲಿ ಆರಂಭವಾಗಿರುವ ಎಂಇಎಸ್ ಕಿಡ್ಡೋಸ್ ಹಾಗೂ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಗೆ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು. ಎನ್.ಕೇಶವ ಮೂರ್ತಿ, ರಾಧಾ ಸುಂದ್ರೇಶ್, ಕಾಂತಾ ದೀಪಕ್ ಇದ್ದರು
Published on

ಚಿಕ್ಕಮಗಳೂರು: ಬೈಪಾಸ್ ಸಮೀಪದ ಎಂಇಎಸ್ ಬಿಎಡ್ ಕಾಲೇಜಿನ ಆವರಣದಲ್ಲಿ ನೂತನವಾಗಿ ಆರಂಭಗೊಂಡ ಎಂಇಎಸ್ ಕಿಡ್ಡೋಸ್ ಹಾಗೂ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಗೆ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಶಾಲೆ ಸುತ್ತಮುತ್ತ ಹಚ್ಚ ಹಸಿರಿನಿಂದ ಕೂಡಿರುವ ವಾತಾವರಣವಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಎಂಇಎಸ್ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಡಿ.ಎಲ್. ವಿಜಯ್‌ಕುಮಾರ್ ಮಾತನಾಡಿ, ಕಿಡ್ಡೋಸ್ ಶಾಲೆಯಿಂದ ನರ್ಸರಿ, ಎಲ್‌ಕೆಜಿ, ಯುಜಿಕೆ ಹಾಗೂ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಿಂದ ಒಂದರಿಂದ ಐದನೇ ತರಗತಿಗಳು ಆರಂಭಗೊಳಿಸಲಾಗಿದೆ ಎಂದು ತಿಳಿಸಿದರು.
ಎಂಇಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಕೇಶವ ಮೂರ್ತಿ, ಉಪಾಧ್ಯಕ್ಷೆ ರಾಧಾ ಸುಂದ್ರೇಶ್, ಸದಸ್ಯರಾದ ಕಾಂತಾ ದೀಪಕ್, ಬಿ.ಶ್ರೀದೇವಿ, ಷಡಾಕ್ಷರಿ, ಐ.ಎನ್.ಬಸವೇಗೌಡ, ಕೋ ಆರ್ಡಿನೇಟರ್ ಶ್ರೀಧರ್, ವ್ಯವಸ್ಥಾಪಕಿ ಮಂಜುನಾಥ್ ಭಟ್, ಟಿ.ಕೆ.ಶ್ರೀಲಕ್ಷೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net