

ಬೈಲಹೊಂಗಲ: ಬೆಳಗಾವಿ ಗಡಿಭಾಗದಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ರಾಜಕೀಯ ಲಾಭಕ್ಕಾಗಿ ಮರಾಠಿ ಭಾಷಿಕರರನ್ನು ಪ್ರಚೋದಿಸುವ ಮೂಲಕ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಎಂಇಎಸ್ ನಾಯಕರನ್ನು ಗಲಭೆಕೋರರೆಂದು ಪರಿಗಣಿಸಿ ಗಡಿಪಾರು ಮಾಡಬೇಕೆಂದು ಕರವೇ ತಾಲೂಕು ಟಕವು ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಮೂಲಕ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಿತು.
ತಾಲೂಕಾಧ್ಯ ವಿಠ್ಠಲ ಕಡಕೋಳ ಮಾತನಾಡಿ, ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ಮಾಡಿತು. ಅಧಿವೇಶನದ ಸಂದರ್ಭದಲ್ಲಿ ಮರಾಠಿ ಮೇಳ ಮಾಡಿ, ಪದೇಪದೇ ಶಾಂತಿಭಂಗ ಮಾಡುತ್ತಿರುವ ಎಂಇಎಸ್ ನಾಯಕರನ್ನು ಮುಂಜಾಗ್ರತವಾಗಿ ಬಂಧಿಸಿ ಅವರನ್ನು ಗಡಿಪಾರು ಮಾಡುವ ಮೂಲಕ ಸರ್ಕಾರ ಕನ್ನಡದ ಹಿತ ಕಾಯಬೇಕು. ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಎಂಇಎಸ್ ಸಂಟನೆಯನ್ನು ನಿಷೇಧಿಸುವ ರ್ನಿಣಯ ಕೆಗೊಳ್ಳಬೇಕೆಂದು ಆಗ್ರಹಪಡಿಸಿದರು. ತಾಲೂಕು ಯುವ ಟಕಾ ಅಧ್ಯ ರಾಜು ಕಡಕೋಳ ಮಾತನಾಡಿದರು. ಮುಖಂಡರಾದ ಮಣಿಕಂಠ ಮತ್ತಿಕೊಪ್ಪ, ಸೋಮು ದೊಡಗೌಡರ, ಲೋಹಿತ ಬಡಿಗೇರ, ಅಭಿಷೇಕ ಬನ್ನೂರ, ಸಾಂಗ್ಲೆಪ್ಪ ಬೆಳವಡಿ ಇತರರು ಇದ್ದರು.