ಡಾ.ರಾಜ್‌ಕುಮಾರ್ ಸಜ್ಜನಿಕೆಯ ಮೇರು ಪರ್ವತ

12
Published on

ಮೈಸೂರು: ಡಾ.ರಾಜ್‌ಕುಮಾರ್ ಸಿನಿಮಾದಲ್ಲಿ ಮಾತ್ರ ಆದರ್ಶ ನಾಯಕನ ಪಾತ್ರದಲ್ಲಿ ವಿಜೃಂಭಿಸಲಿಲ್ಲ. ಅವರು ನಿಜ ಜೀವನದಲ್ಲಿಯೂ ಸರಳ ಸಜ್ಜನಿಕೆಯ ಮೇರು ಪರ್ವತವೇ ಆಗಿದ್ದರು ಎಂದು ಕವಯಿತ್ರಿ ಡಾ.ಲತಾ ರಾಜಶೇಖರ್ ಬಣ್ಣಿಸಿದರು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾ ಮಂಟಪದಲ್ಲಿ ಇಂಚರ ಸಾಂಸ್ಕ ೃತಿಕ ಪ್ರತಿಷ್ಠಾನ, ಹೊಂ್ಸುಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಡಾ.ರಾಜ್ ಸಾಧನಾ ಪ್ರಶಸ್ತಿ’ ಪ್ರದಾನ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ವಾನಸ ಅವರಿಗೆ ಅಭಿನಂದನಾ ಸವಾರಂಭದಲ್ಲಿ ಮಾತನಾಡಿದರು.

ಮಹಾನ್ ಸಾಧಕರಾದ ಡಾ.ರಾಜ್‌ಕುಮಾರ್ ಮೇರು ವ್ಯಕ್ತಿತ್ವದ ಅಪ್ರತಿಮ ಅಭಿಜಾತ ಕಲಾವಿದರಾಗಿದ್ದರು. ರಾಜ್‌ಕುಮಾರ್ ಅವರ ವಿನಯಶೀಲ ವ್ಯಕ್ತಿತ್ವ ಮತ್ತು ಅವರ ಸಾಧನೆಗೆ ರಾಜ್‌ಕುಮಾರ್ ಅವರನ್ನು ಹೋಲಿಸಬಹುದೇ ವಿನಃ ಬೇರೊಬ್ಬರನ್ನು ಅವರಿಗೆ ಹೋಲಿಸಲು ಸಾಧ್ಯವೇ ಇಲ್ಲ ಎಂದರು.

ಅವರ ಎಲ್ಲ ಸಿನಿಮಾಗಳೂ ಸಮಾಜಕ್ಕೆ ಒಂದಲ್ಲ ಒಂದು ಸಂದೇಶ ನೀಡುವ, ಕುಟುಂಬ ಸದಸ್ಯರೆಲ್ಲರೂ ಕುಳಿತು ನೋಡಬಹುದಾದ ಸದಭಿರುಚಿಯ ಸಿನಿಮಾಗಳಾಗಿದ್ದವು. ಆದ್ದರಿಂದಲೇ ರಾಜ್‌ಕುಮಾರ್ ಅವರು ನಾಡಿನ ಜನಮಾನಸದಲ್ಲಿ ಚಿರಸ್ಮರಣೀಯರಾಗಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡ ಸಾಧಕರನ್ನು ಗುರುತಿಸಿ ಸನ್ಮಾನಿಸಿದರೆ, ಅವರಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲು ಉತ್ತೇಜನ ಸಿಗುತ್ತದೆ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ವಾನಸ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎನ್. ಧನಂಜಯ (ಹವ್ಯಾಸಿ ರಂಗಭೂಮಿ), ಡಾ ಪೂರ್ಣಿಮಾ ಮಧುಸೂಧನ್(ವೈದ್ಯಕೀಯ), ಕೆ.ರಮೇಶ್(ಸಾಹಿತ್ಯ), ಡಾ.ಆರ್.ಡಿ.ಕುಮಾರ್(ಕಾನೂನು ಮತ್ತು ಸಂಘಟನೆ), ರಮೇಶ್‌ಕುಮರ್(ಗಾಯನ), ಭಾಗ್ಯಲಕ್ಷ್ಮಿ(ಭರತನಾಟ್ಯ) ಅವರಿಗೆ ಡಾ. ರಾಜ್ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸವಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ರಂಗಕರ್ಮಿ ರಾಜಶೇಖರ ಕದಂಬ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುವಾದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net