ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

medha college
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿದ್ಯಾನಗರ ಶ್ರೀ ಮೇಧಾ ಪಿಯು ವಿಜ್ಞಾನ ಕಾಲೇಜ್​ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಳೆದ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಶಿರಿ ಪಾಟೀಲ, ದಿಶಾ ರಾಯ್ಕರ್, ಪ್ರಿಯಾಂಕ ಸಜ್ಜನ್, ಸಂಸ್ಕಾರ ಚೋಗಲೆ, ರಾಷ್ಟ್ರ ಮಟ್ಟದ ಕರಾಟೆಯಲ್ಲಿ ದ್ವಿತೀಯ ಸ್ಥಾನ ಪಡೆದ ಖುತ್ವಿಕಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ನೀರಾವರಿ ನಿಗಮದ ಎಂಡಿ ರಾಜೇಶ ಅಮ್ಮೀನಭಾವಿ, ಉದ್ಯಮಿ ಮಹಾಂತೇಶ ಖೋದಾನಪುರ, ನಿವೃತ್ತ ಬ್ಯಾಂಕ್ ಅಧಿಕಾರಿ ಕೃಷ್ಣಾ ಹಂಚಾಟೆ ಪಾಲ್ಗೊಂಡಿದ್ದರು. ಶಾರದಾ ಅಮ್ಮಿನಭಾವಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಕೋಟ್ರಯ್ಯ ಟಿ.ಕೆ.ಎಂ. ಕಾಲೆಜಿನ ಪ್ರಗತಿಯನ್ನು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net