ಶಕ್ತಿದೇವತೆಗಳ ಆರಾಧನೆಯಿಂದ ಪುಣ್ಯ

2MNL1
Published on

ಮುನವಳ್ಳಿ: ನವರಾತ್ರಿ ಹಬ್ಬ ಶಕ್ತಿದೇವತೆಗಳ ಆರಾಧನೆಯಾಗಿದ್ದು, ದೇವಿ ಪುರಾಣ ಆಲಿಸುವುದರಿಂದ ಪುಣ್ಯ ಪ್ರಾಪ್ತವಾಗಿ ಬದುಕು ಪಾವನವಾಗುತ್ತದೆ ಎಂದು ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಶ್ರೀದೇವಿ ಪುರಾಣ ಮಂಗಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶಿಂದೋಗಿ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಶ್ರೀಗಳು ಮಾತನಾಡಿ, ನವರಾತ್ರಿ ಜಗದ ಅಂಧಕಾರ ಕಳೆದು ಸಮದ್ಧಿಯತ್ತ ಹೆಜ್ಜೆ ಇಡಲು ಅನುವು ಮಾಡಿಕೊಡುತ್ತದೆ ಎಂದರು. ಪುರಸಭೆ ಅಧ್ಯ ಸಿ.ಬಿ. ಬಾಳಿ ಹಾಗೂ ಸಹಕಾರಿ ಧುರೀಣ ಉಮೇಶ ಬಾಳಿ ಮಾತನಾಡಿ, ಕೆಟ್ಟ ಗುಣಗಳೆಂಬ ರಾಸರನ್ನು ದೇವಿಯಂತೆ ನಾವು ಸಂಹರಿಸಬೇಕು ಎಂದರು.

ಜಯಸುಧಾ ೌಂಡೇಷನ್​ ವತಿಯಿಂದ ಜರುಗಿದ ನವದುರ್ಗೆಯರ ವೇಷಭೂಷಣ ಹಾಗೂ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸೋಮಶೇಖರ ಯಲಿಗಾರ ಅಧ್ಯತೆ ವಹಿಸಿದ್ದರು. ಪ್ರವಚನಕಾರರಾದ ಸಂಗಯ್ಯ ಹಿರೇಮಠ, ಶ್ರೀನಿವಾಸ ಕುಲಕರ್ಣಿ, ರಾಧಾ ಕುಲಕರ್ಣಿ, ಬಸು ಶಿವಪೇಟಿ, ರಮೇಶ ಪವಾರ, ಶಿವಾಜಿ ಜಾಧವ, ಗುರುನಾಥ ಪತ್ತಾರ, ಟಿ.ಎನ್​.ಮುರಂಕರ, ಕೀರಪ್ಪ ಬಾಬುನವರ, ಬಸು ಪವಾರ, ಆನಂದ ಪವಾರ, ಉಮೇಶ ಕದಂ, ಸತೀಶ ಕದಂ, ಮಂಜು ಕದಂ, ಅಪ್ಪಾಜಿ ಕದಂ, ವಿನೋದ ಬಾಬುನವರ, ಅಣ್ಣಪ್ಪ ಪೂಜೇರ, ವಿಜಯ ಬಾಬುನವರ, ಸಾಗರ ಕದಂ, ಸದ್ಭಕ್ತ ಮಂಡಳಿ, ಶಿವಾಜಿ ಯುವಕ ಮಂಡಳದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net