

ಮಂಗಳೂರು: ರಕ್ತದಾನ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುತ್ತದೆ. ರಕ್ತದಾನದಂತಹ ಸೇವಾ ಕಾರ್ಯವನ್ನು ಮಾಡಿದರೆ ಅದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಶ್ರೀ ಶಿವಭಕ್ತಿ ಯೋಗ ಸಂಘದ ಸದಸ್ಯ ಕೆ ಪ್ರವೀಣ್ ಕುಮಾರ್ ಹೇಳಿದರು.
ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ರಾಷ್ಟೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಇಂಡಿಯನ್ ರೆಡ್ ಕ್ರಾಸ್ ಘಟಕ ಮತ್ತು ಲಯನ್ಸ್ ಕ್ಲಬ್ ಕುಡ್ಲ ಇದರ ಸಹಬಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಜೀವ ಉಳಿಸುವ ಪುಣ್ಯಕಾರ್ಯ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಗೂ ಸಹಕಾರಿಯಾಗುತ್ತದೆ. ಸದೃಢ ವ್ಯಕ್ತಿ ರಕ್ತವನ್ನು ದಾನ ಮಾಡಿದರೆ, ಅಷ್ಟೇ ಅಂಶದಷ್ಟು ಹೊಸ ರಕ್ತವು ಎರಡು ತಿಂಗಳೊಳಗೆ ತುಂಬುವ ಮೂಲಕ ಇನ್ನಷ್ಟು ಚೈತನ್ಯ, ಉತ್ಸಾಹ ಬರುತ್ತದೆಂದು ಎಂದರು.
ಲಯನ್ಸ್ ಕುಡ್ಲ ಇದರ ಅಧ್ಯಕ್ಷರಾದ ಲಯನ್ ಪ್ರಮೋದ್ ರೈ ಮಾತನಾಡಿ, ರಕ್ತದಾನ ಮಾಡುದರಿಂದ ನಾವು ಅರೋಗ್ಯವಾಗಿರುತ್ತೇವೆ. ನಮ್ಮಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಪ್ರತಿಯೊಬ್ಬರು ರಕ್ತದಾನ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ರಕ್ತದಾನದಲ್ಲಿ ಜಾತಿ ಮತ ಭೇದವಿಲ್ಲ. ರಕ್ತದಾನ ಶ್ರೇಷ್ಠ ಮಹಾದಾನ ಎಂದರು.
ಶ್ರೀ ಗೋಕರ್ಣನಾಥ ಶಿಕ್ಷಣ ಸಂಸ್ಥೆಯ ಸಂಚಾಲಕ ವಸಂತ ಕಾರಂದೂರ್ ಅಧ್ಯಕ್ಷತೆ ವಹಿಸಿದ್ದರು.
ಇಂಡಿಯನ್ ರೆಡ್ ಕ್ರಾಸ್ ಘಟಕದ ಸಂಚಾಲಕ ಪ್ರವೀಣ್, ಬಿ.ಎಡ್ ವಿಭಾಗದ ಪ್ರಾಂಶುಪಾಲ ಉದಯಕುಮಾರ್, ಎಚ್.ಡಿ.ಎಫ್.ಸಿಯ ಸೀನಿಯರ್ ಮೆನೇಜರ್ ಕುಶಾಲಪ್ಪ ಗೌಡ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕ ಯತೀನ್, ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಕ್ರಮಧಿಕಾರಿ ಬಾಲಚಂದ್ರ, ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕಿ ರವಿಕಲ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಉಪಕಾರ್ಯಕ್ರಮಧಿಕಾರಿ ಪ್ರತೀಕ್ಷಾ, ಉಪನ್ಯಾಸಕ ಉಮೇಶ್ ಹೆಗ್ಡೆ, ಕ್ಯಾಪ್ಟನ್ ಪ್ರವೀಣ್ ಭಾಗವಹಿಸಿದರು.
ಧನುಶ್ರೀ ನಿರೂಪಿಸಿದರು. ನಿರೀಕ್ಷಾ ಸ್ವಾಗತಿಸಿದರು. ಶೇಲ್ಮಾ ವಂದಿಸಿದರು.
--------------------
ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಯುತ್ತದೆ. ರಕ್ತದಾನ ಮಹಾದಾನ, ರಕ್ತದಾನ ಮಾಡಿದವರು ಶ್ರೇಷ್ಠರು. ರಕ್ತಗೂ ಕೂಡ ಭೇದ-ಭಾವ ಇಲ್ಲ ಎಂದರು. ನಮ್ಮ ರಕ್ತದೋತ್ತಡವನ್ನು ನಿಯಂತ್ರಿಸುತ್ತದೆ. ಕಬ್ಬಿಣ ಅಂಶದ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ರಕ್ತದಾನ ಮಾಡುದರಿಂದ ನಮ್ಮ ದೇಹದ ಅರೋಗ್ಯ ಮತ್ತು ನಮ್ಮ ಹೃದಯದ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು.
-ವಸಂತ ಕಾರಂದೂರ್,
ಶ್ರೀ ಗೋಕರ್ಣನಾಥ ಶಿಕ್ಷಣ ಸಂಸ್ಥೆಯ ಸಂಚಾಲಕ