ಪುರಾಣ ಪ್ರವಚನ ಆಲಿಕೆಯಿಂದ ಪುಣ್ಯಪ್ರಾಪ್ತಿ

14-09-Shiva-2
ರಾಯಚೂರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗುರುವಾರ ಪಂಚಲಿಂಗೇಶ್ವರನಿಗೆ ಲಕ್ಷ ಬಿಲ್ವಾರ್ಚನೆ ನೆರವೇರಿಸಲಾಯಿತು. ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಜಯಶಾಂತಲಿಂಗ ಸ್ವಾಮೀಜಿ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಕೆ.ಎಂ.ಪಂಚಾಕ್ಷರಯ್ಯ, ಐ.ಬಸವರಾಜಪ್ಪಗೌಡ ಇದ್ದರು.
Published on

ರಾಯಚೂರು: ಶ್ರಾವಣಮಾಸದ ಪರ್ಯಂತ ದೇವರ ನಾಮಸ್ಮರಣೆ ಮಾಡುವುದರಿಂದ ಹಾಗೂ ಪುರಾಣ ಪ್ರವಚನ ಆಲಿಸುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಮಾಣಿಕಪ್ರಭು ಬಡಾವಣೆಯಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಗುರುವಾರ ಹಮ್ಮಿಕೊಂಡಿದ್ದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವನಾಮವನ್ನು ಪಠಿಸಿ, ಬಿಲ್ವಪತ್ರೆಯನ್ನು ಅರ್ಪಿಸಿದರೆ ಪಾಪಗಳು ಭಸ್ಮವಾಗುತ್ತವೆ. ದೇವರ ಪ್ರೀತಿಗೆ ಪಾತ್ರರಾಗುವಂತಹ ಕೆಲಸವನ್ನು ಮಾಡಬೇಕು ಎಂದರು.
ಬಸವಕಲ್ಯಾಣದ ಜಯಶಾಂತಲಿಂಗ ಸ್ವಾಮೀಜಿ ಮಾತನಾಡಿ, ಹಣ, ಅಂತಸ್ತು ಸೇರಿದಂತೆ ಎಲ್ಲವೂ ಇದ್ದರೂ ಬಹುತೇಕರು ಪಾಪಕರ್ಮಗಳಿಂದಾಗಿ ಅಸುಖಮಯ ಜೀವನ ಸಾಗಿಸುತ್ತಿದ್ದಾರೆ. ಶಿವನಿಗೆ ಭಕ್ತಿಯಿಂದ ಪೂಜಿಸಿದಾಗ ಮಾತ್ರ ನಮ್ಮ ಪಾಪ ಕರ್ಮಗಳು ನಶಿಸಿ ಜೀವನ ಸುಖಮಯವಾಗಿರಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎ.ಪಾಪಾರೆಡ್ಡಿ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಕಡಗೋಲ, ಮುಖಂಡರಾದ ಕೆ.ಶಾಂತಪ್ಪ, ಕೆ.ಎಂ.ಪಂಚಾಕ್ಷರಯ್ಯ, ಐ.ಬಸವರಾಜಪ್ಪಗೌಡ, ಕೆ.ಬಸವರಾಜ, ಷಣ್ಮುಖಪ್ಪ ವೆಂಕಟಾಪುರ, ಉಮೇಶಗೌಡ, ಹರೀಶ ನಾಡಗೌಡ, ರಮೇಶ ಪಾಟೀಲ್, ವಸುಂಧರ ಪಾಟೀಲ್, ಅಕ್ಕಮಹಾದೇವಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net