ಹೆಲಿಪ್ಯಾಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ 2024 ಹಾಜ್ ಮಂಗಳೂರು ವಿನ್ನರ್ಸ್, ಯುನೈಟೆಡ್ ಕ್ರಿಕೆಟರ್ಸ್ ರನ್ನರ್ಸ್

mng--14 Jan Cricket
Published on

ಮಂಗಳೂರು: ಮೇರಿಹಿಲ್ ಹೆಲಿಪ್ಯಾಡ್‌ನಲ್ಲಿ ಭಾನುವಾರ ನಡೆದ ಹೆಲಿಪ್ಯಾಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ 2024ರಲ್ಲಿ ಹಾಜ್ ಮಂಗಳೂರು ತಂಡ ಮೊದಲ ಸ್ಥಾನ ಹಾಗೂ ಯುನೈಟೆಡ್ ಕ್ರಿಕೆಟರ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.


ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ನಾಗೇಶ್ ರಾವ್ ಕಲ್ಯಾಣಪುರ, ಪತ್ರಕರ್ತ ಹರೀಶ್ ಮೋಟುಕಾನ, ಉದ್ಯಮಿ ರಾಜೇಶ್ ಕಾಮತ್, ಮಂಜುನಾಥ್ ಹಾಸನ್, ಮಧುಸೂದನ, ಡೋನಿ ಮಿನೇಜಸ್, ಲೋಲಾಕ್ಷಿ, ರಂಜಿತಾ ಕಾಮತ್ ಅವರು ಅತಿಥಿಗಳಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.


ಚಿದಾನಂದ ಪಂದ್ಯಶೇಷ್ಠ ಪ್ರಶಸ್ತಿ ಪಡೆದರು. ಉತ್ತಮ ಎಸೆತಗಾರ ಸಿನಾನ್, ಉತ್ತಮ ಬ್ಯಾಟರ್ ಮಧುಸೂದನ್, ಉತ್ತಮ ಕ್ಯಾಚರ್ ನವಾಜ್, ಉತ್ತಮ ಆಟಗಾರರು ಉಮೇಶ್, ಶಾನ್ ಅವರು ಬಹುಮಾನ ಪಡೆದರು.


ಮೇರಿಹಿಲ್ ಪರಿಸರದ ಮಧುಸೂದನ್, ಅನಿಲ್ ಕುತ್ತಮೊಟ್ಟೆ, ಅಕ್ಷಯ್, ಕೀರ್ತನ್, ಮನೋಜ್ ಅವರು ಪಂದ್ಯಾಟವನ್ನು ಆಯೋಜಿಸಿದ್ದರು. ಒಟ್ಟು 6 ತಂಡಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net