ಮೇರಿಹಿಲ್ ಸ್ಕೂಟರ್ ಡಿವೈಡರ್‌ಗೆ ಡಿಕ್ಕಿ ಸವಾರ ಮೃತ್ಯು

mng--7 June Nishank
Published on

ಮಂಗಳೂರು : ಡಿವೈಡರ್‌ಗೆ ಸ್ಕೂಟರ್ ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ಮೇರಿಹಿಲ್ ಜಂಕ್ಷನ್ ಬಳಿ ಸಂಭವಿಸಿದೆ.


ಕಾವೂರು ಬೊಲ್ಪುಗುಡ್ಡೆ ನಿವಾಸಿ ಪುರುಷೋತ್ತಮ ದೇವಾಡಿಗ ಅವರ ಪುತ್ರ ನಿಶಾಂಕ್ ದೇವಾಡಿಗ (23) ಮೃತಪಟ್ಟವರು. ಇವರು ರಾತ್ರಿ 11.30ರ ಸುಮಾರಿಗೆ ಸ್ಕೂಟರ್‌ನಲ್ಲಿ ವಿಮಾನ ನಿಲ್ದಾಣ ರಸ್ತೆಯ ಕೆಪಿಟಿ ಕಡೆಯಿಂದ ಪದವಿನಂಗಡಿ ಕಡೆಗೆ ಹೋಗುತ್ತಿದ್ದಾಗ ಮೇರಿಹಿಲ್ ಜಂಕ್ಷನ್ ಬಳಿಯ ನೆಕ್ಸಾ ಶೋರೂಂ ಎದುರುಗಡೆ ರಸ್ತೆ ನಡುವಿನ ಡಿವೈಡರ್‌ಗೆ ಸ್ಕೂಟರ್ ಢಿಕ್ಕಿಯಾಯಿತು.

ನಿಶಾಂಕ್ ಅವರ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಸ್ವರೂಪದ ಹೊಡೆತ ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 12.30ರ ವೇಳೆಗೆ ಮೃತಪಟ್ಟಿದ್ದಾರೆ. ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಶಾಂಕ್ ದೇವಾಡಿಗ ಎ.ಸಿ. ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net