ಹುಬ್ಬಳ್ಳಿಯಲ್ಲಿ ಮೇರಿ ಮಿಟ್ಟಿ ಅಭಿಯಾನ

IMG_20231019_205851_652-1.jpg
Published on

ಹುಬ್ಬಳ್ಳಿ: ನೆಹರು ಯುವ ಕೇಂದ್ರ, ತಾಲೂಕು ಪಂಚಾಯತ ಮತ್ತು ಭಗತ್ ಸಿಂಗ್ ಸೇವಾ ಸಂದ ಸಹಯೋಗದಲ್ಲಿ ತಾಲೂಕು ಮಟ್ಟದ "ನನ್ನ ದೇಶ ನನ್ನ ಮಣ್ಣು' ಅಭಿಯಾನ ಹಮ್ಮಿಕೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ತಾಲೂಕು ಪಂಚಾಯತ ಆವರಣದಿಂದ ಜಾಗೃತಿ ಅಭಿಯಾನ ಹೊರಟು ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಮೂಲಕ ಸಾಗಿತು.

ಪಂಚಾಯತರಾಜ ಇಲಾಖೆಯ ಚಂದ್ರಶೇಖರ ಕುರ್ತಕೋಟಿ, ಸದಾನಂದ ಅಮದಾಪೂರ, ನೆಹರು ಯುವ ಕೇಂದ್ರದ ಪ್ರಭುದೇವ್ ಎನ್.ಜಿ., ಗೌತಮ ರೆಡ್ಡಿ, ಗೌಡಪ್ಪಗೌಡ ಪಾಟೀಲ್, ಭಗತ್ಸಿಂಗ್ ಸೇವಾ ಸಂದ ಅಧ್ಯಕ್ಷ ವಿಶಾಲ ಜಾಧವ, ವಾಲ್ಮೀಕಿ ಮಹಿಳಾ ಸಂದ ಅಧ್ಯೆ ಗೀತಾ ಮುದೆಣ್ಣವರ, ಕಿರಣ ಮುದೆಣ್ಣವರ ಹಾಗೂ ತಾಲೂಕಿನ ಅಧಿಕಾರಿಗಳು, ಆಶಾ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net