ಮರ್ಕಂಟೈಲ್ ಸೊಸೈಟಿ ಹೊಸ ಲೋಗೋ ಅನಾವರಣ

1Manju5
ಬೆಳಗಾವಿ ಟಿಳಕವಾಡಿಯ ಮರ್ಕಂಟೈಲ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಶಾಖೆಯಲ್ಲಿ ನೂತನ ಲೋಗೋವನ್ನು ಸಂಜಯ ಮೋರೆ ಅನಾವರಣಗೊಳಿಸಿದರು. ಶಾರದಾ ಸಾವಂತ, ರಮೇಶ ಓಜಾ, ರಾಜೇಂದ್ರ ಆದೂರಕರ ಇತರರಿದ್ದರು.
Published on

ಬೆಳಗಾವಿ: ನಗರದಲ್ಲಿ ರಜತ ಮಹೋತ್ಸವಕ್ಕೆ ಪದಾರ್ಪಣೆ ಮಾಡುತ್ತಿರುವ ದಿ ಮರ್ಕಂಟೈಲ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಲೋಗೋ, ಠೇವಣಿ ಯೋಜನೆಗಳನ್ನು ಅಧ್ಯಕ್ಷ ಸಂಜಯ ಮೋರೆ ಅನಾವರಣಗೊಳಿಸಿದರು.

ಇಲ್ಲಿನ ಟಿಳಕವಾಡಿಯ ಮರ್ಕಂಟೈಲ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಶಾಖೆಯ 19ನೇ ವಾರ್ಷಿಕೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಸೊಸೈಟಿಯ ಆರಂಭದಿಂದಲೂ ನಡೆಯುತ್ತಿರುವ ಕಾರ್ಯಗಳ ಬಗ್ಗೆ ಹಾಗೂ ಹಳೆಯ ಹಾಗೂ ಹೊಸ ಚಿಹ್ನೆಯ ಬಗ್ಗೆ ಮಾಹಿತಿ ನೀಡಿದರು. ಗ್ರಾಹಕರು ಸೊಸೈಟಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ನಿರ್ದೇಶಕಿ ಶಾರದಾ ಸಾವಂತ, ಉಪಾಧ್ಯಕ್ಷ ರಮೇಶ ಓಜಾ, ನಿರ್ದೇಶಕ ರಾಜೇಂದ್ರ ಆದೂರಕರ, ಕಿಶೋರ ಭೋಸಲೆ, ಸದಾಶಿವ ಕೋಳಿ, ಜಯಪಾಲ ಠಕಾಯಿ, ಸವಿತಾ ಕಣಬರಕರ, ಪ್ರಸನ್ನಾ ರೇವಣ್ಣನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net