ಶ್ರೀ ದುರ್ಗಾದೇವಿಯರ ಭಂಡಾರೋತ್ಸವ ಮೆರವಣಿಗೆ

DEVI NEW
Published on

ಹುಬ್ಬಳ್ಳಿ : ಇಲ್ಲಿನ ಮಂಟೂರ ರಸ್ತೆಯಲ್ಲಿರುವ ಭೋವಿ ವಡ್ಡರ ಕಾಲನಿ (ಸುಣ್ಣದ ಭಟ್ಟಿ)ಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದುರ್ಗಾದೇವಿಯವರ ಮೊದಲನೇ ಭಂಡಾರೋತ್ಸವ ಕಾರ್ಯಕ್ರಮದ ಭವ್ಯ ಮೆರವಣಿಗೆಯು ಮಂಗಳವಾರ ವಿಜೃಂಭಣೆಯಿಂದ ಜರುಗಿತು.

ಪೂಜ್ಯ ಮಾತೋಶ್ರೀ ಹುಲಿಗೆಮ್ಮ ಪೋಸಾ ಅಮ್ಮನವರು ಮೆರವಣಿಗೆಗೆ ಚಾಲನೆ ನೀಡಿದರು.

ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ವಿವಿಧ ವಾದ್ಯಗಳು, ಡೊಳ್ಳುಮೇಳ, ಹೆಜ್ಜೆಮೇಳಗಳೊಂದಿಗೆ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದವು. ಬಮ್ಮಾಪುರ ಓಣಿಯಲ್ಲಿರುವ ಗ್ರಾಮದೇವತೆಯರ ದೇವಸ್ಥಾನಕ್ಕೆ ತೆರಳಿ, ಉಡಿ ತುಂಬಿ ಪೂಜೆ ಕೖಂಕರ್ಯಗಳನ್ನು ನೆರವೇರಿಸಿ ಪುನಃ ಮೂಲ ದೇವಸ್ಥಾನಕ್ಕೆ ಮೆರವಣಿಗೆ ಆಗಮಿಸಿತು.

ಸಮಾಜದ ಅಧ್ಯಕ್ಷ ಬಾಬು ಭೋಜಗಾರ, ಹಿರಿಯರಾದ ವಾಗೇಶಗೌಡ ಪಾಟೀಲ, ವಿರೂಪಾಕ್ಷಿ ಚಲವಾದಿ, ರಾಮಚಂದ್ರ ಭೋಜಗಾರ, ಶರೀಫ್ ಅದವಾನಿ, ದಿನೇಶ ಭೋಜಗಾರ, ಯಲ್ಲಪ್ಪ ಭೋಜಗಾರ, ಯುವಕ ಮಂಡಳದ ಅಧ್ಯಕ್ಷ ಲಕ್ಷ ಣ ವಡ್ಡರ, ಪದಾಧಿಕಾರಿಗಳಾದ ದಶರಥ ವಡ್ಡರ, ನರಸಿಂಹ ಭೋಜಗಾರ, ರಿತೇಶ್ ಭೋಜಗಾರ, ಮಹಾದೇವ ಭೋಜಗಾರ, ಕುಮಾರ ಭೋಜಗಾರ, ಪರಶುರಾಮ ಭೋಜಗಾರ, ಮಂಜುನಾಥ ವೈ. ಭೋಜಗಾರ, ಮಂಜುನಾಥ ಪಿ. ಭೋಜಗಾರ, ಪರಶುರಾಮ ಸುಳ್ಳದ, ರವಿಕುಮಾರ ಮಡ್ಡಿ, ರಘು ಹರಿಜನ, ಶಾರದಾ ಭೋಜಗಾರ, ಶೋಭಾ ತಾಂಬೆ, ಪದ್ಮಾ ದಿವಟೆ, ರೂಪಾ ಹಬೀಬ, ವಿದ್ಯಾ ದಾಗಿನದಾರ, ಗೀತಾ ಬದ್ದಿ, ಸುರೇಖಾ ಭೋಜಗಾರ, ಯೋಗಿಣಿ ಶೆಲ್ಲಿಕೇರಿ ಹಾಗೂ ಇತರ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net