ಮಾನಸಿಕ ಅಸ್ವಸ್ಥರಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿರುವ ಮಾನ್ವಿ ಪೊಲೀಸರು

160420 Manvi Corona Effect Police Sympati on Poor
Published on

ಮಾನ್ವಿ: ಪಟ್ಟಣದ ಪೊಲೀಸರು ಮಾನಸಿಕ ಅಸ್ವಸ್ಥರಿಗೆ ಊಟ ನೀಡುವ ಮೂಲಕ ಮಾನವೀಯತೆ ಮರೆದರು. ಕರೊನಾ ವೈರಸ್ ಹಾವಳಿಯಿಂದ ಪಟ್ಟಣದಲ್ಲಿ ಅಂಗಡಿ, ಹೋಟೆಲ್‌ಗಳು ಬಂದಾಗಿದ್ದರಿಂದ ಮಾನಸಿಕ ಅಸ್ವಸ್ಥರಿಗೆ ಊಟದ ತೊಂದರೆಯಾಗಿದೆ. ದಿನದ ಊಟಕ್ಕೆ ಪರದಾಡುತ್ತಿದ್ದಾರೆ. ಪಟ್ಟಣದಲ್ಲಿ ಕಂಡು ಬರುವ ಮಾನಸಿಕ ಅಸ್ವಸ್ಥರಿಗೆ ಆಹಾರ ಪೊಟ್ಟಣ ನೀಡಿ ಹಸಿವು ನೀಗಿಸಿದರು. ಕರೊನಾ ತಡೆಗೆ ಶ್ರಮಿಸುತ್ತಿರುವ ಪೊಲೀಸರು, ಹೋಮ್‌ಗಾರ್ಡ್, ಗ್ರಾಮೀಣ ಪ್ರದೇಶಗಳಿಂದ ಬರುವ ಪತ್ರಕರ್ತರಿಗೆ ಸಿಪಿಐ ದತ್ತಾತ್ರೇಯ ಕಾರ್ನಾಡ್, ಪಿಎಸ್‌ಐ ರಂಗಪ್ಪ ದೊಡ್ಡಮನಿ, ಸಿದ್ರಾಮಪ್ಪ ಬಿದರಾಣಿ ಪ್ರತಿ ದಿನ ಪೊಲೀಸ್ ಠಾಣೆಯಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದಾರೆ. ಊಟ ಇಲ್ಲದೆ ಬಳಲುವ ಮಾನಸಿಕ ಅಸ್ವಸ್ಥರಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net