

ರಾಯಚೂರು: ನಾನು ತಾಂತ್ರಿಕವಾಗಿ ಬಿಜೆಪಿಯಲ್ಲಿದ್ದರೂ ಮಾನಸಿಕವಾಗಿ ಯಾವ ಪಕ್ಷದಲ್ಲಿಯೂ ಇಲ್ಲ. ರಾಜ್ಯಪಾಲರು ನನ್ನನ್ನು ವಿಧಾನ ಪರಿಷತ್‌ಗೆ ನೇಮಕ ಮಾಡಿದ್ದು, ವಾಸ್ತವಿಕ ನೆಲೆಗಟ್ಟಿನ ಮೇಲೆ ನಾನು ಇರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಶೆರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಎಚ್.ವಿಶ್ವನಾಥ ತಿಳಿಸಿದರು.
ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ರಾಮ ಬಿಜೆಪಿಗೆ ಮಾತ್ರ ಸಿಮೀತವಾಗಿಲ್ಲ. ಭಾರತೀಯರ ರಾಮನಾಗಿದ್ದಾನೆ. ಸ್ವಾಮೀಜಿಗಳು ಸೇರಿದಂತೆ ಹಲವರು ರಾಮ ಮಂದಿರ ಕಾಮಗಾರಿ ಪರಿಪೂರ್ಣವಾಗದೆ ಉದ್ಘಾಟನೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದು, ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಕಾಂತರಾಜ ನೇತೃತ್ವದ ಆಯೋಗ ನಡೆಸಿರುವ ಜಾತಿವಾರು ಸಮೀಕ್ಷೆಯನ್ನು ವಿರೋಸುವುದು ಅಭಿವೃದ್ಧಿಗೆ ಅಡ್ಡಿಯಾದಂತೆ. ವರದಿ ಬಿಡುಗಡೆಯಾಗಿಲ್ಲ, ಈಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ ವರದಿಯನ್ನು ನೋಡದೆ, ಓದದೇ ವಿರೋಸುತ್ತಿದ್ದಾರೆ.
ಸರ್ಕಾರ ಕೂಡಲೇ ವರದಿಯನ್ನು ಸ್ವೀಕರಿಸಿ ಜನರ ಚರ್ಚೆಗೆ ಬಿಡಬೇಕು. ಜನರು ಅದು ಒಳ್ಳೆಯದೋ, ಕೆಟ್ಟದ್ದೋ ಎಂದು ತೀರ್ಮಾನಿಸುತ್ತಾರೆ. ವರದಿ ಬಗ್ಗೆ ಅನಾವಶ್ಯಕ ಬೊಬ್ಬೆ ಹಾಕುವುದು ಸರಿಯಲ್ಲ. ಈ ಹಿಂದೆಯೂ ಹಾವನೂರು ವರದಿ ಬಗ್ಗೆಯೂ ವಿರೋಧ ವ್ಯಕ್ತವಾಗಿತ್ತು. ನಂತರ ಎಲ್ಲರೂ ಒಪ್ಪಿಕೊಂಡರು.
ಶೆರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ಮೂಲಕ ದೇಶದ ವಿವಿಧ ರಾಜ್ಯದಲ್ಲಿರುವ 12 ಕೋಟಿ ಹಾಲುಮತ ಸಮಾಜದ ಜನರನ್ನು ಸಂಘಟಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈಗಾಗಲೇ ಬೆಳಗಾವಿಯಲ್ಲಿ ಅವೇಶನ ನಡೆಸಲಾಗಿದ್ದು, ಸಮಾಜವನ್ನು ಎಸ್ಟಿಗೆ ಸೇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಜನಶಕ್ತಿಯನ್ನು ರಾಜಕೀಯ ಶಕ್ತಿಯಾಗಿ ಬದಲಾಯಿತುವ ಪ್ರಯತ್ನ ನಡೆಯುತ್ತಿದೆ ಎಂದು ಎಚ್.ವಿಶ್ವನಾಥ ತಿಳಿಸಿದರು.
ಈ ಸಂದರ್ಭದಲ್ಲಿ ಶೆರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ರಾಜ್ಯಾಧ್ಯಕ್ಷ ಸಿ.ಎಂ.ನಾಗರಾಜ, ಪದಾಕಾರಿಗಳಾದ ಕೆ.ಅಯ್ಯಣ್ಣ ವಡವಟ್ಟಿ, ರೂಪಾ ಕೃಷ್ಣಪ್ಪ, ಪ್ರೇಮಲತಾ, ಬಾಬು ಬಿದ್ದಿಮನಿ, ನಾಗರಾಜ,ಮಂಜುಳಾ ಉಪಸ್ಥಿತರಿದ್ದರು.