

ವಿಜಯವಾಣಿ ಸುದ್ದಿಜಾಲ ಕುಣಿಗಲ್
ವಿದ್ಯಾರ್ಥಿಗಳು ಸಂಸ್ಕಾರ, ಸೇವಾ ಮನೋಭಾವ ರೂಢಿಸಿಕೊಳ್ಳುವುದರ ಜತೆಗೆ ಆಧುನಿಕ ಯುಗದಲ್ಲಿ ಎಲ್ಲ ಸ್ಪರ್ಧೆಗಳನ್ನು ಎದುರಿಸುವ ಮನೋಸ್ಥೆರ್ಯ ಬೆಳೆಸಿಕೊಳ್ಳಬೇಕು ಎಂದು ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿ, ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ 2023&24ನೇ ಸಾಲಿನ ಸಾಂಸತಿಕ, ಕ್ರೀಡೆ, ಎನ್ನೆಸ್ಸೆಸ್, ರೇಂರ್ಜಸ್ ಮತ್ತು ರೋವರ್ಸ್, ಯುವ ರೆಡ್ ಕ್ರಾಸ್ ಸೇರಿ ವಿವಿಧ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿ, ಶಿಣ ಮತ್ತು ವೃತ್ತಿಗೆ ನೇರ ಸಂಬಂಧವಿದೆ. ಸಮಾಜದಲ್ಲಿ ಸೇವೆ&ತ್ಯಾಗಗಳಂತ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪಾಲಕರು ಬೇರೆಯವರ ಮುಂದೆ ತಲೆತಗ್ಗಿಸದಂತೆ ಆದರ್ಶ ವ್ಯಕ್ತಿತ್ವ
ರೂಢಿಸಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಇಂದಿನ ಯುವ ಜನಾಂಗ ಪ್ರಜ್ಞಾವಂತರಾಗಿದ್ದು, ಸಾಮಾಜಿಕ ಜವಾಬ್ದಾರಿ ಅರಿತು ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಅಬ್ಬರದಲ್ಲಿ ವಿದ್ಯಾರ್ಥಿಗಳು ನೈತಿಕತೆ ಮತ್ತು ಆದರ್ಶಗಳನ್ನು ಮರೆಯಬಾರದು. ಗುರು, ಗುರಿ ಮತ್ತು ಉದ್ದೇಶಗಳ ಮೂಲಕ ಜೀವನದ ಪರೀೆ ಎದುರಿಸಲು ಸನ್ನದ್ಧರಾಗಬೇಕು ಎಂದರು.
ಸಾಂಸತಿಕ ಸಮಿತಿ ಸಂಚಾಲಕ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಗೋವಿಂದರಾಯ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಅಗತ್ಯ. ಅಂಕಗಳಿಗಾಗಿ ಪಠ್ಯದ ಮೂಲಕ ಪರೀೆಗಳನ್ನು ಎದುರಿಸಿದರೆ, ಪಠ್ಯೇತರ ಚಟುವಟಿಕೆಗಳ ಮೂಲಕ ಜೀವನವೆಂಬ ಪರೀೆ ಎದುರಿಸಲು ಸಾಧ್ಯ. ವಿದ್ಯಾರ್ಥಿಗಳು ಭ್ರಮೆಯಲ್ಲಿ ಬದುಕದೆ ವಾಸ್ತವ ಅರಿತು, ಬದುಕು ರೂಪಿಸಿಕೊಳ್ಳಬೇಕು ಎಂದರು.
ಬಿಎ, ಬಿ.ಕಾಂ, ಬಿಬಿಎ, ಬಿ.ಎಸ್ಸಿ ಮತ್ತು ಎಂ.ಕಾಂಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ತುಮಕೂರು ವಿವಿಯಲ್ಲಿ ರ್ಯಾಂಕ್ ಪಡೆದ ಕಾಲೇಜಿನ ಬಿ.ಎ ಎಚ್ಇಕೆ ವಿಭಾಗದ ಕೆ.ಆರ್.ಲಕ್ಷಿ$್ಮ, ಬಿಬಿಎ ವಿದ್ಯಾರ್ಥಿನಿ ಬಿ.ಬಿ.ಮರಿಯಮ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಕ್ರೀಡಾ ಮತ್ತು ಸಾಂಸತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಚಾಯೆರ್ ಪ್ರೊ.ಮಾಯಾ ಸಾರಂಗಪಾಣಿ, ಪ್ರೊ.ರಾಮಾಂಜನಪ್ಪ, ಜೆ.ಶಿವಕುಮಾರ್, ಎನ್ಎಸ್ಎಸ್ ಅಧಿಕಾರಿ ಹನುಮಂತಪ್ಪ, ಎಚ್.ಎನ್.ನಾಗಮ್ಮ, ಎಚ್.ಎನ್.ಸುರೇಶ್, ದೆಹಿಕ ಶಿಣ ನಿರ್ದೇಶಕ ಡಾ.ಜಿ.ಎಸ್ ರವೀಶ್, ಯೂತ್ ರೆಡ್ ಕ್ರಾಸ್ ಸಂಚಾಲಕ ನಾರಾಯಣದಾಸಾ, ರೋವರ್ಸ್ ಮತ್ತು ರೇಂರ್ಜಸ್ ಟಕದ ಸಂಚಾಲಕ ಶ್ರೀನಿವಾಸ, ಪ್ರಭು, ವಿ.ರುಕ್ಮಿಣಿ, ಪ್ರೊ.ಡಾ.ಗಿರಿಜಾಂಬಾ, ಪ್ರೊ.ಡಾ.ಮಮತಾ, ಡಾ.ಲಕ್ಷಿ$್ಮ ನರಸಮ್ಮ, ಪಿ.ಎಲ್.ಮೆಲಾರಯ್ಯ, ಟಿ.ಎನ್.ನರಸಿಂಹಮೂರ್ತಿ, ಮಂಜುಸ್ವಾಮಿ ಇದ್ದರು.