

ನರೇಗಲ್ಲ: ಯಜ್ಞೋಪವೀತ ಧಾರಣೆಯಿಂದ ಮನುಷ್ಯನಿಗೆ ಮನೋಬಲ ದೊರಕುತ್ತದೆ. ಯಜ್ಞೋಪವೀತವನ್ನು ಉಪವೀತ, ಯಜ್ಞಸೂತ್ರ, ವೃತಬಂಧ, ಬಲಬಂಧ, ಮೋನೀಬಂಧ ಹಾಗೂ ಬ್ರಹ್ಮಸೂತ್ರ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಆಡು ಭಾಷೆಯಲ್ಲಿ ಇದಕ್ಕೆ ಜನಿವಾರ ಎನ್ನುತ್ತಾರೆ ಎಂದು ಶ್ರೀದತ್ತಾತ್ರೇಯ ದೇವಸ್ಥಾನದ ಅರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಯಜ್ಞೋಪವೀತ ಧಾರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾರಿಗೆ ಉಪನಯನವಾಗಿರುತ್ತದೆಯೋ ಅವರು ಕಡ್ಡಾಯವಾಗಿ ಯಜ್ಞೋಪವೀತವನ್ನು ತಮ್ಮ ಜೀವನದುದ್ದಕ್ಕೂ ಧಾರಣ ಮಾಡಲೇಬೇಕು. ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ನಡೆಯುವ ಶೋಡೋಪಚಾರ ಸಂಸ್ಕಾರಗಳಲ್ಲಿ ಯಜ್ಞೋಪವೀತ ಧಾರಣೆಯೂ ಒಂದು ಸಂಸ್ಕಾರವಾಗಿದೆ ಎಂದರು.
ಅರುಣಭಟ್ಟ ಗ್ರಾಮಪುರೋಹಿತ, ನಾಗೇಶಭಟ್ಟ ಗ್ರಾಮಪುರೋಹಿತ, ಅರುಣ ಕುಲಕರ್ಣಿ(ಕುರಗಡ್ಡಿ), ಆನಂದ ಕುಲಕರ್ಣಿ, ಕೋಟುಮಚಗಿಯ ಶ್ರೀಧರ ಕುಲಕರ್ಣಿ, ಅಜಿತ ಕುಲಕರ್ಣಿ, ನಿವೃತ್ತ ಉಪನ್ಯಾಸಕ ಎಸ್.ಎಚ್. ಕುಲಕರ್ಣಿ, ಅರುಣ ಕುಲಕರ್ಣಿ, ರಾಮು ಸದರಜೋಷಿ, ಪವನ ಗ್ರಾಮಪುರೋಹಿತ, ಕಾರ್ತಿಕ ಕುಲಕರ್ಣಿ ಇತರರು ಇದ್ದರು.