ಮಾನಸಿಕ ಅಸ್ವಸ್ಥೆ ಬದುಕಿಗೆ ಬೆಳಕಾದ ಅಂತರಗಂಗೆ

333
Published on

ಒಂದೂವರೆ ವರ್ಷ ಬಳಿಕ ಕುಟುಂಬ ಸೇರಿದ ಪಶ್ಚಿಮ ಬಂಗಾಳ ಮಹಿಳೆ

ಕೋಲಾರ: ಮಾನಸಿಕ ಅಸ್ವಾಸ್ಥ$್ಯದಿಂದಾಗಿ ಅಲೆದಾಡುತ್ತಿದ್ದ ಮಹಿಳೆಯೊಬ್ಬರ ಜೀವನದಲ್ಲಿ ಕೋಲಾರದ ಅಂತರಗಂಗೆ ಬುದ್ಧಿಮಾಂದ್ಯ ವಿದ್ಯಾಸಂಸ್ಥೆ ಹೊಸ ಬೆಳಕು ಮೂಡಿಸಿದೆ.
ಹೌದು, ಪಶ್ಚಿಮ ಬಂಗಾಳದಿಂದ ಕೆಲಸ ಅರಸಿ ಪತಿ ಮತ್ತು ಸಂಬಂಧಿಕರೊಂದಿಗೆ ಬೆಂಗಳೂರಿಗೆ ಬಂದಿದ್ದ ಮಹಿಳೆಯೊಬ್ಬರು ಬೆಂಗಳೂರಿನ ಜನಸಂದಣಿಯಲ್ಲಿ ಕುಟುಂಬದಿಂದ ಬೇರ್ಪಟ್ಟು, ಭಾಷೆ ಬಾರದೆ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಲೆಯುತ್ತಿದ್ದರು. ಬಂಗಾರಪೇಟೆಯಲ್ಲಿ ಮಹಿಳೆಯನ್ನು ರಸಿದ ಪೊಲೀಸರು, ಕೋಲಾರದ ಅಂತರಗಂಗೆ ಬುದ್ಧಿಮಾಂದ್ಯ ವಿದ್ಯಾಸಂಸ್ಥೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು.
ಒಂದೂವರೆ ವರ್ಷದಿಂದ ಸಲಹಿದ ಜತೆಗೆ ಮಹಿಳೆಯ ವಿಳಾಸವನ್ನು ಪೊಲೀಸರ ಸಹಕಾರದೊಂದಿಗೆ ಪತ್ತೆ ಮಾಡಿ ಮತ್ತೆ ಕುಟುಂಬದ ಮಡಿಲಿಗೆ ಸೇರಿಸಿದ ವಿಶೇಷ ಕ್ಷಣಕ್ಕೆ ವಿದ್ಯಾಸಂಸ್ಥೆ ಸಾಯಾಗಿದೆ.
ಏನಿದು ಟನೆ: 2023ರ ಏಪ್ರಿಲ್​ 7ರಂದು ಮೈ ತುಂಬಾ ಗಾಯಗಳಿಂದ ಕೂಡಿದ, ಮಾನಸಿಕ ಸ್ಥಿಮಿತ ಕಳೆದುಕೊಂಡು ಪಾನಮತ್ತಳಾಗಿ ಅನುಮಾನಾಸ್ಪದವಾಗಿ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಓಡಾಡುತ್ತಿದ್ದ ಅಪರಿಚಿತೆಯನ್ನು ಬಂಗಾರಪೇಟೆ ಪೊಲೀಸರು ವಶಕ್ಕೆ ಪಡೆದು ಮಾಹಿತಿ ಪಡೆಯಲು ಪ್ರಯತ್ನಿಸಿದ್ದರು. ಆದರೆ, ಆಕೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆಗ ಪೊಲೀಸರು, ಮಹಿಳೆಯನ್ನು ಅಂತರಗಂಗೆ ಬುದ್ಧಿಮಾಂದ್ಯ ವಿದ್ಯಾಸಂಸ್ಥೆ ಹಾಗೂ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು.


ಮಹಿಳೆಗೆ ಒಂದೂವರೆ ವರ್ಷ ಉತ್ತಮ ಆರೈಕೆ, ಪೋಷಣೆ ಹಾಗೂ ನಿರಂತರ ಆಪ್ತ ಸಮಾಲೋಚನೆ ಮಾಡಿದ ಪರಿಣಾಮ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡು, ಸಂಸ್ಥೆಯ ಮಕ್ಕಳು ಮತ್ತು ಹಿರಿಯರೊಂದಿಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಳು. ಕಾಲಕ್ರಮೇಣ ಮಹಿಳೆಯಿಂದ ವಿಳಾಸ ಪತ್ತೆ ಹಚ್ಚಿದ ಸಂಸ್ಥೆ ಸಿಬ್ಬಂದಿ, ಆಕೆಯ ವಿಳಾಸ ಖಚಿತಪಡಿಕೊಂಡು, ಪಶ್ಚಿಮ ಬಂಗಾಳದ ಶಾಲೆಯೊಂದರ ಪ್ರಾಂಶುಪಾಲರನ್ನು ಸಂಪರ್ಕಿಸಿ ಸಂಪೂರ್ಣ ವಿವರ ಕಲೆಹಾಕಿದ್ದಾರೆ.

ಪತ್ನಿ ಹುಡುಕಾಟದಲ್ಲಿ ಪತಿ ಸಾವು!

ಪತ್ನಿಯ ಹುಡುಕಾಟದಲ್ಲಿ ತೊಡಗಿದ್ದ ಪತಿ ಮೈಲಾರಾಯ್​ ಹೆಂಡತಿ ಸಿಗದೆ ಮನನೊಂದು ತೀವ್ರ ಅನಾರೋಗ್ಯದಿಂದ ಕಳೆದ 4 ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ದಂಪತಿಗೆ ಒಬ್ಬನೇ ಮಗನಿದ್ದು, ಆತನೊಂದಿಗೆ ಸಂಪರ್ಕ ಸಾಧಿಸುವಲ್ಲಿ ಸಂಸ್ಥೆಯವರು ಯಶಸ್ವಿಯಾಗಿದ್ದಾರೆ. ಪೊಲೀಸ್​ ಇಲಾಖೆ ಸಹಕಾರದೊಂದಿಗೆ ಎಸ್ಪಿ ಬಿ.ನಿಖಿಲ್​ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾ ಪೊಲೀಸ್​ ಇನ್​ಸ್ಪೆಕ್ಟರ್​ ಕಾಂತರಾಜು ಅವರ ಕಾರ್ಯದಿಂದ ಮಹಿಳೆ ಮತ್ತೆ ಕುಟುಂಬದ ಮಡಿಲು ಸೇರಿದ್ದಾರೆ.


ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿ
ಕೋಲಾರ ಗ್ರಾಮಾಂತರ ಠಾಣಾ ಇನ್​ಸ್ಪೆಕ್ಟರ್​ ಕಾಂತರಾಜು ಅವರು ಎಸ್ಪಿ ನಿಖಿಲ್​ ಆದೇಶದಂತೆ ಬಂಗಾರಪೇಟೆ ಪೊಲೀಸರನ್ನು ಸಂಪರ್ಕಿಸಿ ಮಹಿಳೆಯನ್ನು ಸ್ವಗ್ರಾಮಕ್ಕೆ ತೆರಳಿಸಲು ಇದ್ದ ಕಾನೂನು ತೊಡಕು ನಿವಾರಿಸಿ, ನಂತರ ಪಶ್ವಿಮ ಬಂಗಾಳದ ಡಾಲ್​ ಮೋರ್​ ಟೀ ಗಾರ್ಡನ್​ ಗ್ರಾಮದಲ್ಲಿದ್ದ ಪುತ್ರ ಬಿಜಾಯ್​ನನ್ನು ಸಂಪರ್ಕಿಸಿ ನಗರಕ್ಕೆ ಬರಮಾಡಿಕೊಂಡಿದ್ದಾರೆ. ನಾಲ್ಕು ದಿನದ ಹಿಂದೆ ಬಂಗಾರಪೇಟೆಗೆ ಬಂದ ಮಗನೊಂದಿಗೆ ತಾಯಿಯನ್ನು ರೈಲಿನಲ್ಲಿ ಬಂಗಾರಪೇಟೆಯಿಂದ ಪಶ್ಚಿಮ ಬಂಗಾಳದ ದಾಲ್​ಮೋರ್​ ಟೀ ಗಾರ್ಡನ್​ ಎಂಬ ಸ್ವಗ್ರಾಮಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ತಾಯಿ&ಮಗನ ಭಾವನಾತ್ಮಕ ಕ್ಷಣ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತು.


"ಒಂದು ವರ್ಷಕ್ಕೂ ಹೆಚ್ಚು ಕಾಲ ನನ್ನನ್ನು ಮಗುವಿನಂತೆ ಸಾಕಿ ಸಲುಹಿದ ಅಂತರಗಂಗೆ ಬುದ್ಧಿಮಾಂದ್ಯ ವಿದ್ಯಾಸಂಸ್ಥೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನನ್ನ ಗಂಡ ತೀರಿಕೊಂಡಿರುವ ವಿಷಯ ತಿಳಿದು ನೋವಾಗಿದೆ. ಮಗನೊಂದಿಗೆ ನನ್ನನ್ನು ಸೇರಿಸಿದ ಅಂತರಗಂಗೆ ವಿದ್ಯಾಸಂಸ್ಥೆ ಮತ್ತು ಪೊಲೀಸ್​ ಇಲಾಖೆಗೆ ಜೀವನ ಪೂರ್ತಿ ಋಣಿಯಾಗಿರುತ್ತೇನೆ."
 -ಜೀನಾರಾಯ್​, ಪುನರ್ವಸತಿ ಮಹಿಳೆ


"ಅಂತರಗಂಗೆ ಬುದ್ಧಿಮಾಂದ್ಯ ಸಂಸ್ಥೆಗೆ ಈ ಮಹಿಳೆ ಬಂದಾಗ ಸಂಪೂರ್ಣ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು. ನಿಧಾನವಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಆಕೆಯ ವಿಳಾಸ ಪತ್ತೆ ಹಚ್ಚಲು ಯತ್ನಿಸಿದೆವು. ಆಕೆಯ ಗಂಡ ಮತ್ತು 20 ವರ್ಷದ ಮಗನಿಂದ ದೂರ ಇರುವ ಸಂಗತಿ ತಿಳಿದು, ತಾಯಿ ಮಗನನ್ನು ಪೊಲೀಸ್​ ಇಲಾಖೆಯಿಂದ ಸಹಕಾರದಿಂದ ಮತ್ತೆ ಒಂದು ಮಾಡಿದ್ದೇವೆ. ಈ ಕಾರ್ಯ ನಮಗೆ ತುಂಬಾ ಖುಷಿ ತಂದಿದೆ. ನಮ್ಮ ಸಂಸ್ಥೆ ಹಲವು ಮಾನಸಿಕ ಅಸ್ವಸ್ಥರಿಗೆ ಮತ್ತು ನಿರ್ಗತಿಕರಿಗೆ ಆರೈಕೆ ಮಾಡುತ್ತಿದೆ."
-ಡಾ.ಕೆ.ಎಸ್​ ಶಂಕರ್​ ಅಂತರಗಂಗಾ ಬುದ್ದಿಮಾಂಧ್ಯ ಮತ್ತು ಪುನರ್ವಸತಿ ಕೇಂದ್ರದ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net