ಗಂಡು ಮಗುವಿಗೆ ಜನ್ಮ ನೀಡಿದ ಮಾನಸಿಕ ಅಸ್ವಸ್ಥೆ

brs hospital
Published on

ಉಡುಪಿ: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದಾಗ ರಕ್ಷಿಸಲ್ಪಟ್ಟಿದ್ದ ಅಪರಿಚಿತ ಗರ್ಭಿಣಿ ಮಹಿಳೆ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪಶ್ಚಿಮ ಬಂಗಾಲ ಮೂಲದ ಸುಲೇಕಾ ಎಂಬಾಕೆಯನ್ನು 3 ತಿಂಗಳ ಹಿಂದೆ ರೈಲ್ವೆ ಪೋಲಿಸರು, ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ರಕ್ಷಿಸಿದ್ದರು. ಬಳಿಕ ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ಪುರ್ನವಸತಿ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಆಕೆ 7 ತಿಂಗಳ ಗರ್ಭಿಣೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ಮಹಿಳಾ ನಿಲಯದ ಪೋಷಣೆಯಲ್ಲಿದ್ದಾರೆ. ತಾಯಿ ಮಗುವನ್ನು ಕುಟುಂಬಿಕರೊಂದಿಗೆ ಸೇರಿಸಲು ಉಡುಪಿಯಲ್ಲಿರುವ ಬಂಗಾಲಿ ಸಂಘ&ಸಂಸ್ಥೆಗಳು ಸಹಕರಿಸುವಂತೆ ಜಿಲ್ಲಾ ನಾಗರಿಕ ಸಮಿತಿ ಪ್ರ.ಕಾ. ನಿತ್ಯಾನಂದ ಒಳಕಾಡು ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net