

ರಾಣೆಬೆನ್ನೂರ: ತನಗಿದ್ದ ಮಾನಸಿಕ ಕಾಯಿಲೆ ಗುಣವಾಗಲಿಲ್ಲವೆಂದು ವ್ಯಕ್ತಿಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೊಟ್ಟೂರೇಶ್ವರ ಮಠದ ಬಳಿ ಒಡೆಯರ ಬಾವಿಯಲ್ಲಿ ನಡೆದಿದೆ.
ಗುರುಪ್ರಸಾದ ಕೊಟ್ರಪ್ಪ ಹೊಸರಿತ್ತಿ (32) ಮೃತ ವ್ಯಕ್ತಿ.
ಈತ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ. ಆಸ್ಪತ್ರೆಗೆ ತೋರಿಸಿದರೂ ಗುಣವಾಗಿರಲಿಲ್ಲ. ಇದರಿಂದ ಬೇಸತ್ತು ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.