ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ

IMG20251010203544.jpg
Published on

ಧಾರವಾಡ: ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ. ಸದಾ ಉತ್ತಮ ಆರೋಗ್ಯ ಹೊಂದಲು ಮನಸ್ಸಿಗೆ ಆಘಾತಗಳಾಗದಂತೆ ಜಾಗೃತಿ ವಹಿಸಬೇಕು ಎಂದು ಡಾ. ಸಚಿನ್ ಬಿ.ಎಸ್. ಹೇಳಿದರು.

ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಮನೋರೋಗ ಚಿಕಿತ್ಸಾ ವಿಭಾಗವು ಎಸ್‌ಡಿಎಂ ನರ್ಸಿಂಗ್ ಕಾಲೇಜು ಸಹಭಾಗಿತ್ವದಲ್ಲಿ ಶುಕ್ರವಾರ `ವಿಪತ್ತು ಮತ್ತು ತುರ್ತು ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ, ಸೇವೆಗಳಿಗೆ ಆದ್ಯತೆ' ಎಂಬ ಧ್ಯೇಯೆಯೊಂದಿಗೆ ಆಯೋಜಿಸಿದ್ದ `ವಿಶ್ವ ಮಾನಸಿಕ ಆರೋಗ್ಯ' ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. ಆರೋಗ್ಯ ವೃತ್ತಿಪರರು ತಮ್ಮ ಮಾನಸಿಕ ಆರೋಗ್ಯ ಸಮತೋಲನದಲ್ಲಿರಿಸಿಕೊಳ್ಳಬೇಕು. ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಕಾಳಜಿಯಿಂದ ಚಿಕಿತ್ಸೆ ನೀಡಬೇಕು ಎಂದರು.

ಎಸ್‌ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಮನೋಜ ಶೆಟ್ಟರ್ ಉಪನ್ಯಾಸ ನೀಡಿದರು. ಹಣಕಾಸು ಅಽಕಾರಿ ವಿ.ಜಿ.ಪ್ರಭು, ವೈದ್ಯಕೀಯ ಅಧೀಕ್ಷಕ ಡಾ.ಕಿರಣ ಹೆಗ್ಡೆ, ಎಸ್‌ಡಿಎಂ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪ್ರಸನ್ನ ದೇಶಪಾಂಡೆ ಇತರರಿದ್ದರು. ಬಿತ್ತಿಪತ್ರ ಪ್ರದರ್ಶನ ಮತ್ತು ರಸಪ್ರಶ್ನೆ ಸ್ಪರ್ಧೆಗಳ ವಿಜೆತರಿಗೆ ಬಹುಮಾನ ವಿತರಿಸಲಾಯಿತು. ಡಾ.ಸ್ಪೂರ್ತಿ ಹಾಗೂ ಡಾ.ಮೋಕ್ಷ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾಗೇಶ ಅಜ್ಜವಾಡಿಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net